ಗದಗ:- ಒಂದೆಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ರಾಜ್ಯದೆಲ್ಲೆಡೆ ಈಗಾಗಲೇ ಬಂದ್ ಶುರುವಾಗಿದ್ದು, ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನ ಚಾಲಕರು ದುಪ್ಪಟ್ಟು ದರ ವಿಧಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಗದಗ ನಗರದ ಬಸ್ ನಿಲ್ದಾಣ ಬಳಿ ಖಾಸಗಿ ವಾಹನಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಗದಗ ದಿಂದ ಮುಂಡರಗಿ ಪಟ್ಟಣಕ್ಕೆ ಬರೋಬ್ಬರಿ 100 ರೂ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ದರ 58. ರೂ. ಇದ್ರು 42 ರೂ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ.
ಖಾಸಗಿ ಬಸ್ ಚಾಲಕರು ಹೇಳೋದೇನು?
ಈ ಬಗ್ಗೆ ಖಾಸಗಿ ವಾಹನದ ಚಾಲಕನ ಕೇಳಿದ್ರೆ 20 ರೂ. ಹೆಚ್ಚಿಗೆ ಪಡೆಯುತ್ತಿದೇವೆ ಅಂತಿದ್ದಾರೆ. ಸೀಟ್ ಗಳು ಇಲ್ಲ, ಡಿಸೇಲ್ ರೇಟ್ ಜಾಸ್ತಿ ಇದೆ ನಮ್ಗೆ ವರ್ಕೌಟ್ ಆಗೋದಿಲ್ಲ. ದಿನ ಸಿಗುವ ಹಾಗೇ ಸೀಟ್ ಸಿಕ್ಕರೆ ಅದೇ ದರದಲ್ಲಿ ತಗೆದುಕೊಳ್ಳುತ್ತೇವೆ. ಕಡಿಮೆ ಸೀಟ್ ಗಳು ಇರುವ ಕಾರಣ.. 20 ರೂ. ಜಾಸ್ತಿ ಪಡೆಯುತ್ತಿದ್ದೇವೆ. ನಮ್ಗೆ ದುಡಿಮೆನೆ ಇಲ್ಲ.. ನಾವು ಲಾಸ್ ನಲ್ಲಿದ್ದೇವೆ. ಬಂಗಾರ ಒತ್ತೆ ಇಟ್ಟು ಗಾಡಿ ನಡೆಸುತ್ತಿದ್ದೇವೆ. ಇನ್ನೂ ಕಠಿಣವಾದ್ರೆ ಗಾಡಿ ಮಾರಾಟ ಮಾಡುವ ಕಠಿಣ ಪರಿಸ್ಥಿತಿ ಬಂದಿದೆ. ಇವತ್ತು ಒಂದು ದಿನ ಜಾಸ್ತಿ ಹಣ ಪಡೆಯುತ್ತೇವೆ ಎಂದಿದ್ದಾರೆ.
ಒಟ್ಟಾರೆ ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಗಳ ಚಾಲಕರು ಕೆಎಸ್ ಆರ್ ಟಿಸ್ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿ ದರ್ಬಾರ್ ನಡೆಸುತ್ತಿದ್ದಾರೆ. ಮಳೆಯಲ್ಲೇ ಹೋಗಿ ಚಾಲಕರನ್ನ ಪ್ರಯಾಣಿಕರು ವಿಚಾರಿಸ್ತಿದ್ದು, ದರ ಕೇಳಿ ಶಾಕ್ ಆಗಿದ್ದಾರೆ.
ಇನ್ನೂ ಕೊಪ್ಪಳ ಜಿಲ್ಲೆಗೆ ಟೆಂಪೋ ವಾಹನ ಸಂಚಾರ ಮಾಡುತ್ತಿದೆ. ಗದಗ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ ಟೆಂಪೋ ವಾಹನ ಸಂಚಾರ ಮಾಡುತ್ತಿದ್ದು, KSRTC ಬಸ್ ಗಳಿಲ್ಲದೇ ಪ್ರಯಾಣಿಕರು ಕಂಗಾಲಾಗಿದ್ದಾರೆ.