ಮುದ್ದು ಮುಖದ ಬ್ಯೂಟಿ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ತಮನ್ನಾ: ಶಾಕ್‌ ಆದ ಫ್ಯಾನ್ಸ್‌

0
Spread the love

ಬಹುಭಾಷಾ ನಟಿ ತಮನ್ನಾ ಭಾಟಿಯಾ ತಮ್ಮ ಅದ್ಬುತ ಸೌಂದರ್ಯದಿಂದಲೇ ಸಖತ್‌ ಖ್ಯಾತಿ ಘಳಿಸಿದವರು. ಆಕೆಗಿರೋ ಬಣ್ಣದಿಂದಲೇ ಮಿಲ್ಕಿ ಬ್ಯೂಟಿ ಎಂದೇ ಫೇಮಸ್‌ ಆಗಿರೋ ನಟಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನ್‌ ಮಾಡ್ತಾರೆ ಅನ್ನೋ ಕುತೂಹಲ ಹಲವರಿಗೆ ಇದೆ. ಇದೀಗ ತಮನ್ನಾ ತಮ್ಮ ಬ್ಯೂಟಿ ಸೀಕ್ರೇಟ್‌ವೊಂದನ್ನ ಬಿಟ್ಟುಕೊಟ್ಟಿದ್ದು ಇದನ್ನೂ ಕೇಳಿ ಪ್ರತಿಯೊಬ್ಬರೂ ಶಾಕ್‌ ಆಗಿದ್ದಾರೆ.

Advertisement

ಹಲವು ನಟಿ, ನಟಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಾಸ್ಮೆಟಿಕ್ಸ್‌, ಸರ್ಜರಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತಾರೆ. ಆದರೆ ನಟಿ ತಮ್ಮನ್ನಾ ತಮ್ಮ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಮುಖದ ಮೇಲಿನ ಮೊಡವೆಗಳನ್ನು ತಪ್ಪಿಸಲು ನಟಿ ನಿತ್ಯವು ಬೆಳಗಿನ ಉಗುಳನ್ನು ಮುಖಕ್ಕೆ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಅದನ್ನು ಹಲ್ಲು ಉಜ್ಜುವ ಮುನ್ನ ಮಾಡಬೇಕು ಎಂದು ಹೇಳಿದ್ದಾರೆ.

ಬೆಳಿಗ್ಗೆಯ ಎಂಜಲು ತುಂಬಾ ಪರಿಣಾಮಕಾರಿ. ಆ ಎಂಜಲಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಎಂದೂ ತಮನ್ನಾ ವಿವರಿಸಿದ್ದಾರೆ. ಇದು ವೈಜ್ಞಾನಿಕವಾದ ವಿಚಾರವೇ, ನಾನೇನು ಡಾಕ್ಟರ್‌ ಅಲ್ಲ. ಆದರೆ ಇದು ನನ್ನ ವೈಯಕ್ತಿಕ ಹ್ಯಾಕ್. ಇದರ ಹಿಂದೆ ವಿಜ್ಞಾನವಿದೆ ಎಂದು ನಾನು ನಂಬುತ್ತೇನೆ. ನೀವು ಬೆಳಿಗ್ಗೆ ಎದ್ದಾಗ ನಿಮ್ಮ ದೇಹವು ನಿಮ್ಮ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಸೃಷ್ಟಿಸಿರುತ್ತದೆ’ ಎಂದು ನಟಿ ವಿವರಿಸಿದ್ದಾರೆ.

‘ನಮ್ಮ ಕಣ್ಣುಗಳು ಲೋಳೆಯಿಂದ ತುಂಬಿರುವುದಕ್ಕೆ, ನಮ್ಮ ಮೂಗು ಲೋಳೆಯಿಂದ ತುಂಬಿರುವುದಕ್ಕೆ ಮತ್ತು ನಮ್ಮ ಬಾಯಿ ಹಲ್ಲುಜ್ಜುವ ಮೊದಲು ರಾತ್ರಿಯಲ್ಲಿ ಸಂಗ್ರಹವಾದ ಎಲ್ಲ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವುದಕ್ಕೆ ಇದು ಕಾರಣವಾಗಿದೆ. ನೀವು ಈ ಉಗುಳನ್ನು ಬಳಸಿದರೆ, ಅದು ನಿಮ್ಮ ಮೊಡವೆಗಳನ್ನು ತಕ್ಷಣವೇ ಒಣಗಿಸುತ್ತದೆ’ ಎಂದು ತಮನ್ನಾ ತಮ್ಮ ಬ್ಯೂಟಿ ಸೀಕ್ರೇಟ್‌ ರಿವೀಲ್‌ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here