ಕನ್ನಡದ ಯುವ ನಟ ಸಂತೋಷ ಬಾಲರಾಜ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ ಬಾಲರಾಜ್ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.
ಮೃತ ಸಂತೋಷ್ ಬಾಲರಾಜ್ ಕಿರಿಯ ವಯಸ್ಸಿಗೆ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಫೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಫಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಅವರು ನಿಧನರಾಗಿದ್ದಾರೆ.
ʼಕರಿಯಾ-2ʼ, ʼಕೆಂಪʼ, ʼಗಣಪʼ, ʼಬರ್ಕ್ಲಿʼ, ʼಸತ್ಯʼ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಸಂತೋಷ್ ಬಾಲರಾಜ್ ತಂದೆ ಅನೇಕಲ್ ಬಾಲರಾಜ್ ದರ್ಶನ್ ನಟನೆಯ ʼಕರಿಯʼ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ದರ್ಶನ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. 2022ರಲ್ಲಿ ರಸ್ತೆ ಅಪಘಾತದಲ್ಲಿ ಆನೇಕಲ್ ಬಾಲರಾಜ್ ನಿಧನರಾಗಿದ್ದರು. ಸಂತೋಷ್ ಬಾಲರಾಜ್‌ಗೆ ಮದುವೆ ಆಗಿರಲಿಲ್ಲ, ತಾಯಿ ಜೊತೆಗಿದ್ದರು. ಜಾಂಡೀಸ್ ಎಂದು ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಸಂತೋಷ್ ಬಾಲರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.