ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ತುಂಬು ಗರ್ಭೀಣಿಯಾಗಿದ್ದು ಸದ್ಯದಲ್ಲೇ ಮುದ್ದಾಗ ಮಕ್ಕಳ ಆಗಮನವಾಗಲಿದೆ. ಭಾವನಾ ರಾಮಣ್ಣ ಮದುವೆ ಆಗದೆಯೇ ಐವಿಎಫ್ ಚಿಕಿತ್ಸೆ ಮೂಲಕ ಮಗುವನ್ನು ಪಡೆಯಲು ಮುಂದಾಗಿದ್ದು ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಭಾವನ ಮಕ್ಕಳು ಹುಟ್ಟುವ ಮುನ್ನವೇ ತಮ್ಮ ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಟಿ ಭಾವನಾ ರಾಮಣ್ಣ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಹಲವು ನಟಿಯರು ಭಾಗಿಯಾಗಿ ಭಾವನಾ ಅವರಿಗೆ ಶುಭ ಹಾರೈಸಿದ್ದಾರೆ. ತಮಗೆ ಅವಳಿ ಮಕ್ಕಳು ಹುಟ್ಟುತ್ತಿರುವ ಸುದ್ದಿಯನ್ನು ನಟಿ ಈಗಾಗಲೇ ಹೇಳಿಕೊಂಡಿದ್ದು ಇದೀಗ ಮಕ್ಕಳಿಗೆ ಹೆಸರುಗಳನ್ನು ಸೆಲೆಕ್ಟ್ ಮಾಡಿದ್ದಾರೆ.
ವೈದ್ಯರು ಅವಳಿ ಮಕ್ಕಳು ಹುಟ್ಟುತ್ತಾರೆಂದು ಹೇಳಿದ್ದು ಇದೇ ಹೆಸರು ಇಡಬೇಕು ಎಂದೂ ನಿರ್ಧರಿಸಿದ್ದಾರಂತೆ. ಅದರಲ್ಲೂ ಹೆಣ್ಣು ಮಗು ಹುಟ್ಟಿದರೆ, ರುಕ್ಮಿಣಿ ಎಂದು ಹೆಸರು ಇಡುವುದಕ್ಕೆ ನಟಿ ಭಾವನಾ ರಾಮಣ್ಣ ನಿರ್ಧರಿಸಿದ್ದಾರೆ. ಅಂದ ಹಾಗೆ ರುಕ್ಮಿಣಿ ಎಂಬುದು ಭಾವನಾ ಅವರ ಅಜ್ಜಿಯ ಹೆಸರಾಗಿದ್ದು ಇದೇ ಹೆಸರನ್ನು ತಮ್ಮ ಮಕ್ಕಳಿಗೂ ಇಡಲು ಭಾವನ ನಿರ್ಧರಿಸಿದ್ದಾರೆ. ಆದರೆ, ಗಂಡು ಮಗುವಿಗೆ ಇನ್ನೂ ಹೆಸರಿಡುವ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.