ವಿಚ್ಚೇಧನ ಸಿಗ್ತಿದ್ದಂಗೆ ಸ್ಟಾರ್ ನಟಿ ಜೊತೆ ನಟ ಧನುಷ್ ಡೇಟಿಂಗ್?
ಕಾಲಿವುಡ್ ಸ್ಟಾರ್ ನಟ, ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ಸದ್ಯ ಡೇಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರಿಂದ ಡಿವೋರ್ಸ್ ಪಡೆದುಕೊಂಡಿರುವ ನಟ ಇದೀಗ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ ಹಿಂದೆ ಬಿದಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ಕಳೆದ ಕೆಲ ದಿನಗಳಿಂದ ಧನುಷ್ ಹಾಗೂ ಮೃಣಾಲ್ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಇಬ್ಬರು ಡೇಟಿಂಗ್, ಮೀಟಿಂಗ್, ಪಾರ್ಟಿ ಎಂದು ಸುತ್ತಾಡುತ್ತಿದ್ದು ಇಬ್ಬರು ಜೊತೆಗಿರುವ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮೃಣಾಲ್ ಠಾಕೂರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟ ಧನುಷ್ ಕಾಣಿಸಿಕೊಂಡಿದ್ದು, ಅವರಿಬ್ಬರು ಜೊತೆಗೆ ಇರುವ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮೃಣಾಲ್ ಅವರ ಕೈಯನ್ನು ಹಿಡಿದು ಧನುಷ್ ಮಾತನಾಡುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುತ್ತಿದ್ದಾರೆ.
ಅಲ್ಲದೆ ಕಳೆದ ತಿಂಗಳು ಧನುಷ್ ಅವರ ‘ತೇರೆ ಇಷ್ಕ್ ಮೇ’ ಚಿತ್ರದ ಪಾರ್ಟಿಯಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದರು. ಈ ಪಾರ್ಟಿಯನ್ನು ಬರಹಗಾರ್ತಿ ಮತ್ತು ನಿರ್ಮಾಪಕಿ ಕನಿಕಾ ಧಿಲ್ಲೊನ್ ಆಯೋಜಿಸಿದ್ದು ಈ ಪಾರ್ಟಿಯಲ್ಲಿ ಧನುಷ್ ಹಾಗೂ ಮೃಣಾಲ್ ಕೈ ಕೈ ಹಿಡಿದು ಸುತ್ತಾಡಿದ್ದಾರೆ.
ಅಂದ ಹಾಗೆ ಐಶ್ವರ್ಯ ಅವರೊಂದಿಗೆ 18 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಧನುಷ್, 2022ರಲ್ಲಿ ಬೇರೆಯಾಗುವುದಾಗಿ ಘೋಷಿಸಿದರು. ಕಳೆದ ವರ್ಷ ಏಪ್ರಿಲ್ನಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.