ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ನಾಡಿಗೇರ್ ಓಣಿಯ ಪಿ.ಟಿ. ಕಾಕಿ ಎಂಬುವವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.
Advertisement
ಸ್ಥಳಕ್ಕೆ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಡ್ರೋನ್ ಕ್ಯಾಮೆರಾ, ಬಲೆ ಮತ್ತು ಅರಿವಳಿಕೆ ಚುಚ್ಚುಮದ್ದು ಬಳಸುವ ಮೂಲಕ ಎಂಟು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಚುಚ್ಚು ಮದ್ದು ನೀಡಿದ ಬಳಿಕ ಚಿರತೆಯನ್ನು ಬೋನಿನಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಚಿರತೆ ಯಾರಿಗೂ ಹಾನಿ ಮಾಡದೇ ಬಲೆಗೆ ಸಿಕ್ಕಿದ್ದು, ಕಾಡಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.