ಕಾಂಗ್ರೆಸ್ ಸಂಸದೆಯ ಸರ ಕದ್ದ ಖದೀಮರು ಅರೆಸ್ಟ್!

0
Spread the love

ನವದೆಹಲಿ:- ದೆಹಲಿ ಪೊಲೀಸರು ಕಾರ್ಯಚರಣೆ ನಡೆಸಿ ಸಂಸದೆ ಸುಧಾ ರಾಮಕೃಷ್ಣನ್ ಅವರ ಸರ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸಿದ್ದಾರೆ.

Advertisement

ತಮಿಳುನಾಡಿನ ಮೈಲಾಡುತುರೈನ ಸಂಸದೆ ಸುಧಾ ಅವರು ಆಗಸ್ಟ್ 4 ರಂದು ಚಾಣಕ್ಯಪುರಿಯ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಡಿಎಂಕೆ ಶಾಸಕಿ ರಾಜತಿ ಅವರ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಸುಧಾ ಅವರ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದ.

ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಇದೀಗ ಪೊಲೀಸರು ಖದೀಮನನ್ನು ಬಂಧಿಸಿದ್ದು, ಆತನಿಂದ ಚಿನ್ನದ ಸರವನ್ನೂ ವಶಕ್ಕೆ ಪಡೆಯಲಾಗಿದೆ.


Spread the love

LEAVE A REPLY

Please enter your comment!
Please enter your name here