ಬಸ್ ಬಾರದಿದ್ದಕ್ಕೆ ಹಾಲಿನ ಗಾಡಿ ಹತ್ತಿದ ವಿದ್ಯಾರ್ಥಿಗಳು: ಪಲ್ಟಿ ಹೊಡೆದ ವಾಹನ, 7 ಮಂದಿಗೆ ಗಾಯ!

0
Spread the love

ಮೈಸೂರು:– ಮೈಸೂರಿನ ಹುಣಸೂರು ತಾಲೂಕು ಸೋಮನಹಳ್ಳಿ ಬಳಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಬಸ್ ಬಾರದ ಹಿನ್ನೆಲೆ ಹತ್ತಿದ್ದ ಹಾಲಿನ ವಾಹನ ಪಲ್ಟಿಯಾದ ಪರಿಣಾಮ 7 ಮಂದಿ ಗಾಯವಾಗಿರುವ ಘಟನೆ ಜರುಗಿದೆ.

Advertisement

ಪಾಲಾಕ್ಷ, ವಿದ್ಯಾಚರಣ, ಅಪ್ಪು, ನಿತಿನ್, ಚಂದ್ರಶೇಖರ್, ಮನುಕುಮಾರ್, ಎಮ್ಮೆಕೊಪ್ಪಲಿನ ಸಂಜಯ್ ಗಾಯಗೊಂಡ ವಿದ್ಯಾರ್ಥಿಗಳು. ಇವರು, ಮೂಕನಹಳ್ಳಿ ಗ್ರಾಮದ ನಿವಾಸಿಗಳು. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿ ಪಾಲಾಕ್ಷಗೆ ಗಂಭೀರ ಗಾಯವಾಗಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಬಸ್ ಬಾರದ ಹಿನ್ನೆಲೆ ಅದೇ ಮಾರ್ಗದಲ್ಲಿ ಬಂದ ಹಾಲಿನ ವಾಹನಕ್ಕೆ ಹತ್ತಿದ್ದರು. ಈ ಹಾಲಿನ ವಾಹನವು ಮೈಸೂರು ಹುಣಸೂರು ಹೆದ್ದಾರಿಯ ಸೋಮನಹಳ್ಳಿ ಬಳಿ ಪಲ್ಟಿಯಾಗಿದೆ.

ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here