ಸಂಸದ ಸುಧಾಕರ್ ಕಾರು ಚಾಲಕ ಆತ್ಮಹತ್ಯೆ ಕೇಸ್: ಉನ್ನತ ಶಿಕ್ಷಣ ಸಚಿವರು ಹೇಳಿದ್ದೇನು?

0
Spread the love

ಬೆಂಗಳೂರು:- ಸಂಸದ ಸುಧಾಕರ್ ಕಾರು ಚಾಲಕ ಆತ್ಮಹತ್ಯೆ ಕೇಸ್ ಗೆ ಸಂಬಧಪಟ್ಟಂತೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಕುರಿತು ಇಂದು ಬೆಳಗ್ಗೆಯೇ ಮಾಹಿತಿ ಬಂದಿದೆ. ಬಾಬು ಎನ್ನುವ ಚಾಲಕ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರ ಜೇಬಿನಲ್ಲಿ ಚೀಟಿ ಇರುವುದು ಪತ್ತೆ ಆಗಿದ್ದು ಇದರಲ್ಲಿ ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಎನ್ನುವವರ ಹೆಸರುಗಳು ಇವೆ ಎಂದು ಹೇಳಿದ್ದಾರೆ.

ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಅವರ ಹೆಸರುಗಳು ಇರುವುದರಿಂದ ಇದು ಸೂಕ್ಷ್ಮವಾದ ವಿಚಾರ ಆಗಿದೆ. ಸಂಪೂರ್ಣವಾಗಿ ಪ್ರಕರಣದ ತನಿಖೆ ಆಗಬೇಕು. ಪೋಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಲಿದೆ. ವಸ್ತುಸ್ಥಿತಿ ಏನೇನಿದೆ ಅಂತ ನೋಡಬೇಕು. ಪಾರದರ್ಶಕ ತನಿಖೆ ಆಗಬೇಕು ಎಂದು ಹೇಳಿದ್ದಾರೆ


Spread the love

LEAVE A REPLY

Please enter your comment!
Please enter your name here