ಆಪತ್ಕಾಲದ ಬಾಂಧವ ಎಂದೇ ಕರೆಯಿಸಿಕೊಳ್ಳುವ ಬಂಗಾರ ಅನಾದಿ ಕಾಲದಿಂದಲೂ ವೈಭವದ, ಸಂಪತ್ತಿನ ಪ್ರತೀಕ ಎಂದೆನಿಸಿದೆ. ಚಿನ್ನ ಕೊಳ್ಳಲು ಕಾರಣ ಬೇಕಿಲ್ಲ ಎಂದು ಹೇಳುವ ಕಾಲವೊಂದಿತ್ತು ಆದರೀಗ ಅದೇ ಚಿನ್ನಾಭರಣದ ಖರೀದಿ ಮಾಡಬೇಕು ಎಂದರೆ ಬೆಲೆ ತಗ್ಗಿದರೆ ಸಾಕು ಆಗ ಖರೀದಿಸುವ ಎಂದು ಹೇಳುತ್ತಾರೆ.
ಚಿನ್ನ ಖರೀದಿಗೆ ವಿಶೇಷ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರದ ಮಹತ್ವ ಅಂತಹದ್ದಾಗಿದೆ. ಬಂಗಾರವಿದ್ದರೆ ಆಪತ್ತಿಗೆ ಆದೀತು ಎಂದು ಚಿನ್ನಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಸ್ಕೀಮ್ಗೆ ಸೇರಿಕೊಂಡು ತಿಂಗಳಿಗೆ ಇಷ್ಟಿಷ್ಟು ದುಡ್ಡು ಹಾಕಿ ಚಿನ್ನ ಖರೀದಿಸಿ ಎತ್ತಿಟ್ಟುಕೊಳ್ಳುತ್ತಿದ್ದಾರೆ. ಚಿನ್ನ ಖರೀದಿಗೂ ಮುನ್ನ ಒಮ್ಮೆ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ.
ಚಿನ್ನದ ಬೆಲೆ ಇವತ್ತು ಶುಕ್ರವಾರ ಗ್ರಾಮ್ಗೆ 70 ರೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 94,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,03,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 94,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 8ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 94,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,310 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,490 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 94,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,310 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 94,700 ರೂ
- ಚೆನ್ನೈ: 94,700 ರೂ
- ಮುಂಬೈ: 94,700 ರೂ
- ದೆಹಲಿ: 94,850 ರೂ
- ಕೋಲ್ಕತಾ: 94,700 ರೂ
- ಕೇರಳ: 94,700 ರೂ
- ಅಹ್ಮದಾಬಾದ್: 94,750 ರೂ
- ಜೈಪುರ್: 94,850 ರೂ
- ಲಕ್ನೋ: 94,850 ರೂ
- ಭುವನೇಶ್ವರ್: 94,700 ರೂ