ಜಗದ್ಗುರು ವರವಿ ಮೌನೇಶ್ವರ ಯುವಕ ಮಂಡಳ ಅಸ್ತಿತ್ವಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸವದತ್ತಿಯ ಶ್ರೀ ಸೋಮಲಿಂಗಯ್ಯ ಒಡೆಯರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜಗದ್ಗುರು ವರವಿ ಮೌನೇಶ್ವರ ಯುವಕ ಮಂಡಳ ಅಸ್ತಿತ್ವಕ್ಕೆ ಬಂದಿತು. ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುರುಂದ ಅಧ್ಯಕ್ಷತೆ ವಹಿಸಿದ್ದರು.

Advertisement

ಜಗದ್ಗುರು ವರವಿ ಮೌನೇಶ್ವರ ಯುವಕ ಮಂಡಳದ ಅಧ್ಯಕ್ಷರಾಗಿ ತರ್ಲಗಟ್ಟದ ಚಿದಾನಂದ ಆಚಾರ್ಯ, ಉಪಾಧ್ಯಕ್ಷರಾಗಿ ಹರ್ತಿಯ ಗಣೇಶ ಕಮ್ಮಾರ, ಮುದಾದಡಿ ರಮೇಶ ಎಂ.ಪಿ., ಗಣೇಶ ಜಿ.ಎನ್, ಪ್ರಧಾನ ಕಾರ್ಯದಶಿಯಾಗಿ ಧಾರವಾಡದ ಸಂತೋಷ ಜಿ.ಅರ್ಕಾಚಾರ್ಯ, ಸಹ ಕಾರ್ಯದರ್ಶಿಯಾಗಿ ವಿ. ಆನಂದಾಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಕುರ್ತಕೋಟಿಯ ಅಶೋಕ ಬಡಿಗೇರ, ಸಂಚಾಲಕರಾಗಿ ಗದಗದ ಶಂಕರಾಚಾರ್ಯ ಪತ್ತಾರ, ಗದಗದ ಶ್ರೀಧರ ಪತ್ತಾರ, ಬೆಳಗಾವಿಯ ರಮೇಶ ಬಡಿಗೇರ, ಹಾವೇರಿಯ ಸತೀಶ ಕನವಳ್ಳಿ ಆಯ್ಕೆಯಾದರು.

ನೂತನ ಪದಾಧಿಕಾರಿಗಳನ್ನು ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುರುಂದ, ಟ್ರಸ್ಟಿಗಳಾದ ಕೊಟ್ರೇಶ ಆಚಾರ್ಯ, ನಿರಂಜನ ಬಡಿಗೇರ, ಚಂದ್ರಕಾಂತ ಸೋನಾರ, ನಾರಾಯಣಪ್ಪ ಸಿಂಗಟಾಲೂರ, ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ, ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ, ಬೆಟಗೇರಿ ಕಾಳಿಕಾ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ, ಸಮಾಜದ ಮುಖಂಡರಾದ ವಿಶ್ವನಾಥ ಯ.ಕಮ್ಮಾರ, ಮೌನೇಶ ಚಿ.ಬಡಿಗೇರ(ನರೇಗಲ್ಲ), ನಾಗರಾಜ ಕಮ್ಮಾರ, ಎಸ್.ಎನ್. ಬಡಿಗೇರ, ಮನೋಹರ ಕೆ., ಪೂರ್ವಾಚಾರ, ನರಸಪ್ಪ, ಗಣೇಶ ಕಮ್ಮಾರ, ಚಿದಾನಂದ ಶಿಲ್ಪಿ, ಅಶೋಕ ಬಡಿಗೇರ, ಶ್ರೀಧರ ಪತ್ತಾರ, ಸೇರಿದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು, ಸದಸ್ಯರು, ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು ಅಭಿನಂದಿಸಿದರು. ವಿಶ್ವನಾಥ ಯ. ಕಮ್ಮಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


Spread the love

LEAVE A REPLY

Please enter your comment!
Please enter your name here