ಗದಗ: ತಾಲೂಕಿನ ಹುಲಕೋಟಿಯ ಜಿ.ಸಿ.ಟಿ.ಎಂ. ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಅರ್ಜುನ ಗೊಳಸಂಗಿ ಆಯ್ಕೆಯಾಗಿದ್ದಾರೆ.
Advertisement
ಕಳೆದ ಹಲವು ದಶಕಗಳಿಂದ ಬೋಧನೆ ಸೇರಿದಂತೆ ಸಾಹಿತ್ಯಿಕ – ಸಂಘಟನಾತ್ಮಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ.ಅರ್ಜುನ ಗೊಳಸಂಗಿ ಸದ್ಯ ಜಿಲ್ಲೆಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ವೇದಿಕೆಯ ಅಧ್ಯಕ್ಷರೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರೂ, ಗದಗ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತಿಗಳು, ಸಂಘಟಿಕರೂ ಹಾಗೂ ಅತ್ಯಂತ ಕ್ರಿಯಾಶೀಲರೂ ಆಗಿರುವ ಡಾ.ಅರ್ಜುನ ಗೊಳಸಂಗಿ ಅವರನ್ನು ಅನೇಕರು ಅಭಿನಂದಿಸಿದ್ದಾರೆ.