ನವಲಗುಂದ:- ಧಾರಾಕಾರ ಮಳೆಗೆ ಸೇತುವೆ ಜಲಾವೃತಗೊಂಡು ವಾಹನ ಸವಾರರು ಪರದಾಟ ನಡೆಸಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದಲ್ಲಿ ಜರುಗಿದೆ.
Advertisement
ನಾಯಕನೂರು ಬಳಿ ಸೇತುವೆ ಜಲಾವೃತಗೊಂಡ ಪರಿಣಾಮ ಗದಗ-ನಾಯಕನೂರು- ನರಗುಂದ ಸಂಪರ್ಕ ಸ್ಥಗಿತವಾಗಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹಳ್ಳ ಉಕ್ಕಿ ಹರಿಯುತ್ತಿವೆ. ಸೇತುವೆ ಮುಳುಗಡೆಗೊಂಡ ಪರಿಣಾಮ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ರಸ್ತೆ ಸ್ಥಗಿತಗೊಂಡ ಪರಿಣಾಮ, ಶಲವಡಿ-ನವಲಗುಂದ ಮಾರ್ಗವಾಗಿ ಕೆಲವು ಪ್ರಯಾಣಿಕರು ನರಗುಂದಕ್ಕೆ ಬಂದಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.