ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ತಹಸೀಲ್ದಾರರಾಗಿ ಅಧಿಕಾರ ವಹಿಸಿಕೊಂಡ ಕೆ. ರಾಘವೇಂದ್ರ ರಾವ್ ಅವರನ್ನು ಕಾರ್ಯಾಲಯದಲ್ಲಿ ಜಗದ್ಗುರು ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ವತಿಯಿಂದ ಗದಗ ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ನೇತೃತ್ವದಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಸವದತ್ತಿಯ ಶ್ರೀ ಸೋಮಲಿಂಗಯ್ಯ ಒಡೆಯರ ಮಹಾಸ್ವಾಮಿಗಳು, ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುರುಂದ, ಟ್ರಸ್ಟಿಗಳಾದ ಕೊಟ್ರೇಶ ಆಚಾರ್ಯ, ಚಂದ್ರಕಾಂತ ಸೋನಾರ, ನಾರಾಯಣಪ್ಪ ಸಿಂಗಟಾಲೂರ, ಪ್ರಮುಖರಾದ ರಾಜಗೋಪಾಲ ಡಿ.ಕಡ್ಲಿಕೊಪ್ಪ, ಶ್ರೀಧರ ಕೊಣ್ಣೂರ, ವಿಶ್ವನಾಥ ಯ.ಕಮ್ಮಾರ, ಮೌನೇಶ ಚಿ. ಬಡಿಗೇರ(ನರೇಗಲ್ಲ), ನಾಗರಾಜ ಕಮ್ಮಾರ, ಎಸ್.ಎನ್. ಬಡಿಗೇರ, ಗೋವಿಂದಪ್ಪ ಬಡಿಗೇರ, ನಾಗರಾಜ ಬಡಿಗೇರ, ಗಣೇಶ ಕಮ್ಮಾರ, ಅಶೋಕ ಬಡಿಗೇರ, ಶಂಕರಾಚಾರ್ಯ ಪತ್ತಾರ, ಶ್ರೀಧರ ಪತ್ತಾರ ಸೇರಿದಂತೆ ಸಮಾಜದ ಗಣ್ಯರು ಹಾಜರಿದ್ದರು.



