ಪ್ರತಾಪ್ ಸಿಂಹ ಫೋನ್ ಪರಿಶೀಲಿಸಿದ್ರೆ, ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗಬಹುದು: ಎಂ ಲಕ್ಷ್ಮಣ್

0
Spread the love

ಮಡಿಕೇರಿ:– ಪ್ರತಾಪ್ ಸಿಂಹ ಫೋನ್ ಪರಿಶೀಲಿಸಿದ್ರೆ ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗಬಹುದು ಎಂದು ಎಂ ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, 2023 ರಲ್ಲಿ ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ಬಳಿಕ ಪ್ರತಾಪ್ ಸಿಂಹ ಅವರ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ವೇಳೆ ಪ್ರತಾಪ್ ಸಿಂಹ ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ನಗ್ನ ವೀಡಿಯೋಗಳು ಕಂಡು ಬಂದಿದ್ದವು. ಇದನ್ನು ನೋಡಿದ ಅಮಿತ್ ಶಾ ಅವರೇ ದಿಗ್ಭ್ರಮೆಗೊಂಡಿದ್ದರು. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ ಎಂದು ಹೇಳಿದ್ದಾರೆ.

Advertisement

ಪ್ರಜ್ವಲ್ ರೇವಣ್ಣ ರೀತಿಯಲ್ಲಿಯೇ ಪ್ರತಾಪ್ ಸಿಂಹ ಅವರ ಮೊಬೈಲ್‌ನಲ್ಲಿ ವೀಡಿಯೋಗಳಿವೆ. ಅಂತಹ ವಿಡಿಯೋ ಇರುವುದಕ್ಕೆ ಗೃಹ ಸಚಿವರು ಪ್ರತಾಪ್ ಸಿಂಹ ಮೊಬೈಲ್ ಸೀಜ್‌ ಮಾಡಿಸಿದ್ದರು. ಪ್ರತಾಪ್ ಸಿಂಹ ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್‌ನಲ್ಲೇ ಇವೆ, ಮೊಬೈಲ್‌ನಲ್ಲಿರುವ ವಿಡಿಯೋಗಳನ್ನು ನೋಡಿದ ನಂತರವೇ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡಬಾರದು ಎಂಬ ನಿರ್ಧಾರ ಕೈಗೊಂಡರು. ಇಂತಹ ಪ್ರತಾಪ್ ಸಿಂಹಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಪ್ರದೀಪ್ ಈಶ್ವರ್ ಸೇರಿದಂತೆ ಹಲವಾರು ನಾಯಕರಿಗೆ ಬೈಯೋದೆ ಇವನ ಕೆಲಸವಾಗಿದೆ‌. ದೆಹಲಿಯಲ್ಲಿ ಇವರಿಗೆ ಬ್ಲೂ ಬಾಯ್‌ ಎನ್ನುತ್ತಾರೆಂದು ಲೇವಡಿ ಮಾಡಿದ್ದಾರೆ.

ಪ್ರತಾಪ್‌ ಸಿಂಹಗೆ ಕಾಂಗ್ರೆಸ್ ಪಕ್ಷ ಹಾಗೂ ತನ್ನ ಕುಟುಂಬದ ಬಗ್ಗೆ ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. 2024ರ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿದ್ದರೆ ನಾನು 3 ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದೆ. ಇನ್ಮುಂದೆ ಪ್ರತಾಪ್‌ ಸಿಂಹ ಎಲ್ಲಿ ನಿಂತರೂ ನಾನು ಅದೇ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here