ಚಿತ್ರದುರ್ಗ:- ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ಮಾಡಿದ್ದಾರೆ. ಮೆಟ್ರೋ ಉದ್ಘಾಟನೆ ಮೋದಿ ಕೊಡುಗೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಬಿ ಪಾಟೀಲ್, ರಾಜ್ಯದಿಂದಲೂ ಸಹ ಕೇಂದ್ರಕ್ಕೆ ತೆರಿಗೆ ಹೋಗುತ್ತದೆ.
ಕೇಂದ್ರದವರು ಅವರ ಮನೆಯಿಂದ ಹಣ ತಂದು ಹಾಕಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಸರಿಯಾದ ರೀತಿಯಲ್ಲಿ ಟ್ಯಾಕ್ಸ್ ಹಣ ಬರುತ್ತಿಲ್ಲ. ರಾಜ್ಯದ 62, 63 ಸಾವಿಕ ಕೋಟಿ ಹಣ ಮೊದಲು ಕೊಡಲಿ. ಬಿಜೆಪಿ ಬರುವ ಮೊದಲೂ ಕೂಡ ರಾಜ್ಯದಲ್ಲಿ ಎಲ್ಲಾ ಇತ್ತು.
ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮೆಟ್ರೋ ಕಾಮಗಾರಿ ನಡೆದಿದೆ. ರಾಹುಲ್ ಗಾಂಧಿ ಅವರು ಪ್ರಮಾಣ ವಚನ ಸ್ವೀಕರಿಸಿ ಸಂಸತ್ ಗೆ ಬಂದಿದ್ದಾರೆ. ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ. ಬಿಜೆಪಿಯವರು ಎಲ್ಲೋ ಕೂತು ಮಾತನಾಡುವುದು ಸರಿಯಲ್ಲ.
ಸಂವಿಧಾನದ ಅಡಿಯಲ್ಲಿ ಓಟು ಪಡೆದು ರಾಹುಲ್ ಗಾಂಧಿ ಅವರು ಬಂದಿದ್ದಾರೆ. ನಕಲಿ ಮತದಾರರ ಬಗ್ಗೆ ಮಾಹಿತಿ ಕೊಡುವಂತೆ ರಾಹುಲ್ ಗಾಂಧಿ ಅವರು ಕೇಳಿದ್ದಾರೆ. ಡಿಜಲೀರಣದ ಮೂಲಕ ರಾಹುಲ್ ಗಾಂಧಿ ಮಾಹಿತಿ ಕೇಳಿದ್ದಾರೆ. ಸಂಶಯಾಸ್ಪದವಾಗಿ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ ಬಿ ಪಾಟೀಲ್ ಗರಂ ಆಗಿದ್ದಾರೆ.