ಡೆಹ್ರಾಡೂನ್:– ಭಾರಿ ಭೂಕುಸಿತದಿಂದ ಉತ್ತರಕಾಶಿಯಿಂದ ಗಂಗ್ನಾನಿಗೆ ತೆರಳುವ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
Advertisement
ಅಧಿಕಾರಿಗಳು ಏನಂದ್ರೂ?
ಮಣ್ಣು ರಸ್ತೆಗೆ ಬಿದ್ದು, ರಸ್ತೆ ಸಂಪೂರ್ಣ ದುಸ್ತರಗೊಂಡಿದೆ. ಈ ಹಿನ್ನೆಲೆ ಗಂಗ್ನಾನಿ ಪ್ರವೇಶ ಕಡಿತಗೊಂಡಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಹಾಗೂ ಅವಶೇಷಗಳನ್ನು ತೆಗೆದು ಸಂಚಾರವನ್ನು ಪುನಃಸ್ಥಾಪಿಸಲು ಜೆಸಿಬಿಗಳನ್ನು ನಿಯೋಜಿಸಲಾಗಿದೆ.
ಆದಷ್ಟು ಬೇಗ ರಸ್ತೆಯನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ನಿವಾಸಿಗಳು ಮತ್ತು ಪ್ರಯಾಣಿಕರು ಜಾಗರೂಕರಾಗಿರಬೇಕು ಮತ್ತು ಅನಗತ್ಯ ಸಂಚಾರವನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.