ಮುಂಬೈ:- ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿರುವ ಘಟನೆ ಪುಣೆಯಲ್ಲಿ ಜರುಗಿದೆ. ವಾಹನವೊಂದು 30 ಅಡಿ ಕಂದಕಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.
Advertisement
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಪ್ರಯಾಣಿಕರು ವ್ಯಾನ್‌ನಲ್ಲಿದ್ದರು. ಇವರೆಲ್ಲ ಖೇಡ್ ತಹಸಿಲ್‌ನಲ್ಲಿರುವ ಶ್ರೀ ಕ್ಷೇತ್ರ ಮಹಾದೇವ ಕುಂದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ಹಾಗೂ ಗಾಯಾಳುಗಳು ಪಾಪಲ್ವಾಡಿ ಗ್ರಾಮದವರಾಗಿದ್ದಾರೆ. ಶ್ರಾವಣ ಮಾಸದ ಶುಭ ಸೋಮವಾರದ ಪೂಜೆಗಾಗಿ ಅವರು ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ PMNRF ನಿಧಿಯಿಂದ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.