ಬೈಕ್ʼಗೆ ಡಿಕ್ಕಿ ಹೊಡೆದ ಸ್ಲೀಪರ್ ಬಸ್: ಸ್ಥಳದಲ್ಲೇ ಮೂವರು ಸಾವು, ಹಲವರಿಗೆ ಗಾಯ!

0
Spread the love

ಜೈಪುರ:- ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರ್​ ಬಳಿಯ ರಾಷ್ಟ್ರೀಯ ಹೆದ್ದಾರಿ 68ರಲ್ಲಿ ಸ್ಲೀಪರ್ ಬಸ್​ವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಜೀವ ಬಿಟ್ಟಿದ್ದು ಕೆಲ ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಜರುಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 68ರಲ್ಲಿ ಖಾಸಗಿ ಸ್ಲೀಪರ್ ಬಸ್​, ಬೈಕ್​ಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದರಿಂದ ಮೂವರು ಜೀವ ಕಳೆದುಕೊಂಡಿದ್ದಾರೆ. ಬಸ್​ ಡಿಕ್ಕಿಯಾಗುತ್ತಿದ್ದಂತೆ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದ್ದು ದೊಡ್ಡ ಮಟ್ಟದ ಹೊಗೆ ಕೂಡ ಆವರಿಸಿಕೊಂಡಿತ್ತು. ಬಸ್​ನಲ್ಲಿ ಕೆಲವು ಜನರಿಗೆ ಸುಟ್ಟ ಗಾಯಗಳು ಆಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ

ಬೈಕ್ ಹಾಗೂ ಬಸ್​ ಎರಡು ಮುಖಾಮುಖಿ ಡಿಕ್ಕಿಯಾಗಿದ್ದು ಕ್ಷಣದಲ್ಲೇ ಬೆಂಕಿ ಭಾರೀ ಮಟ್ಟದಲ್ಲಿ ಹೊತ್ತಿಕೊಂಡಿದೆ. ಇದರಿಂದಲೇ ಬಸ್​ ಒಳಗಿದ್ದ ಪ್ರಯಾಣಿಕರು ಒಳಗೆ ಸಿಕ್ಕಿಕೊಂಡಿದ್ದರು. ತಕ್ಷಣ ಸ್ಥಳೀಯರು ರಕ್ಷಣೆ ಮಾಡಿದ್ದರಿಂದ ದೊಡ್ಡ ಅನಾಹುತ ತಪ್ಪಿತು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here