ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕೋಟುಮಚಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಮತ್ತು ಶ್ರೀಪರ್ವತಮಲ್ಲೆಶ್ವರನ 33ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಬೆ ಕಾರ್ಯಕ್ರಮ ಆಗಸ್ಟ್ 13ರಂದು ನೆರವೇರಲಿದೆ.
ಮುಂಜಾನೆ 6 ಗಂಟೆಗೆ ವೇ.ಮೂ ಗಂಗಾಧರಯ್ಯ ಹಿರೇಮಠ ಮತ್ತು ವೇ.ಮೂ ಪಕ್ಕೀರಯ್ಯ ಹಿರೇಮಠ ಇವರಿಂದ ಶ್ರೀ ವೀರಭದ್ರೇಶ್ವರ ಮತ್ತು ಪರ್ವತಮಲ್ಲೆಶ್ವರನಿಗೆ ರುದ್ರಾಭಿಷೇಕ ಜರುಗಲಿದೆ. ಮುಂಜಾನೆ 7 ಗಂಟೆಗೆ ಶ್ರೀ ವೀರಭದ್ರೇಶ್ವರನಿಗೆ ವೀರಗಾಸೆ ಪೂಜೆ ಕಟ್ಟುವುದು, ಶ್ರೀ ಕಲ್ಮೆಶ್ವರ ದೇವಸ್ಥಾನದಿಂದ ಗುಗ್ಗಳ ಕಾರ್ಯಕ್ರಮ ಮೆರವಣಿಗೆ ಮೂಲಕ ಅಗ್ನಿಗೆ ಎಡೆ, ನಂತರ 8 ಗಂಟೆಗೆ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಪಲಕ್ಕಿ ಸಮೇತ ಶ್ರೀಮದ್ ನಂದಿ ಧ್ವಜದೋದಿಗೆ ಸಕಲ ಪುರರವಂತರಿಂದ ಗಂಗಾ ಪೂಜೆ, ಮಧ್ಯಾಹ್ನ 12ಕ್ಕೆ ಶ್ರೀ ವೀರಭದ್ರೇಶ್ವರನ ಅಗ್ನಿ ಕಾರ್ಯ, ಶಿವಪ್ರಸಾದ ದಾಸೋಹ ಜರುಗುವದು.
ಸಾಯಂಕಾಲ 7 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ದಿವ್ಯ ಸಾನ್ನಿಧ್ಯವನ್ನು ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ದ್ವರೆಸ್ವಾಮಿಮಠ ಬೈರನಹಟ್ಟಿ ವಹಿಸಲಿದ್ದಾರೆ. ವೇ.ಮೂ ಗಂಗಾಧರಯ್ಯ ಹಿರೇಮಠ, ಪಕ್ಕೀರಯ್ಯ ಹಿರೇಮಠ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.