ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಬಸವರಾಜ ಭೋರಶೆಟ್ಟರ ಇವರ ಮಹಾಮನೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಶಸಾಪ ಅಧ್ಯಕ್ಷ ಎಂ.ಕೆ. ಲಮಾಣಿ, 12ನೇ ಶತಮಾನದ ಶರಣರ ನುಡಿಗಳು ಪ್ರತಿಯೊಂದು ಜೀವಿಯ ಜೀವನವನ್ನು ಕಟ್ಟಿಕೊಡುವ ನುಡಿ ಮುತ್ತುಗಳಾಗಿವೆ. ಸರ್ವರೂ ಶರಣರ ತತ್ವಗಳನ್ನು ಪಾಲಿಸಿ ಸತ್ಯ, ಕಾಯಕ ನಿಷ್ಠೆ, ಪ್ರಮಾಣಿಕತೆಯಿಂದ ಬದುಕನ್ನು ಪಾವನಗೊಳಿಸಿಕೊಳ್ಳಬೇಕೆಂದರು.
ಉದ್ಯಮಿ ಸಿ.ಸಿ. ನೂರಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಎಚ್.ಎಂ. ದೇಗಿರಿ, ಕೆ.ಎ. ಬಳಿಗೇರ, ಮಂಜುನಾಥ ಕೊಕ್ಕರಗುಂದಿ, ನಂದಾ ಕಪ್ಪತ್ತನವರ, ಮುತ್ತು ಮಜ್ಜಗಿ, ಬಸವರಾಜ ಭೋರಶೆಟ್ಟರ, ರೇಣುಕಾ ಲಕ್ಕುಂಡಿ, ನೀಲವ್ವ ಕುಳಗೇರಿ, ಶಾಂತಾ ಪಾಟೀಲ್, ಶಶಿಕಲಾ ಸಂಕದಾಳ, ಎಂ.ಎ. ಮಕಾನದಾರ, ಹನಮಂತಪ್ಪ ಪೂಜಾರ, ಫಕ್ಕೀರೇಶ ಭೋರಶೆಟ್ಟರ, ಪ್ರಭು ಹಲಸೂರ, ಬಸವರಾಜ ಭೋರಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.