ಧರ್ಮಸ್ಥಳಕ್ಕೆ ಅಪಪ್ರಚಾರ| ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್!

0
Spread the love

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು,ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ ಬಗ್ಗೆ ಈಗಾಗಲೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಮಂಗಳವಾರ ವಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿತ್ತು. ಶೂನ್ಯವೇಳೆಯಲ್ಲಿ ಅವಕಾಶ ಕೊಟ್ಟಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ಕೊಟ್ಟಿದೆ. ಮತ್ತಷ್ಟು ಚರ್ಚೆಗೆ ಅವಕಾಶ ಬೇಕು ಅಂತ ಕೇಳಿದ್ದಾರೆ. ನಾನು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.

ಧರ್ಮಸ್ಥಳ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿ ತನಿಖೆ ಮಾಡೋದಕ್ಕೆ ಬಿಡಬೇಕು. ತನಿಖೆ ಮುಗಿಯೋ ಮುನ್ನವೇ ನಾವೇ ತೀರ್ಪು ಕೊಡೋದು ಸರಿಯಲ್ಲ. ಧಾರ್ಮಿಕ ಸ್ಥಳದ ಪಾವಿತ್ರತೆಯನ್ನ ಕಾಪಾಡೋದು ನಮ್ಮ ಕರ್ತವ್ಯ. ಈ ವಿಚಾರದಲ್ಲಿ ಯಾರೂ ಸ್ವಯಂ ಅಭಿಪ್ರಾಯ ಕೊಡಬಾರದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here