ಧರ್ಮಸ್ಥಳಕ್ಕೆ ಅಪಪ್ರಚಾರ: ಗದಗದಲ್ಲಿ ಜನಾಕ್ರೋಶ; ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ- ಹಲವು ಸಂಘಟನೆಗಳು ಸಾಥ್!

0
Spread the love

ಗದಗ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಜನಾಕ್ರೋಶ‌ ವ್ಯಕ್ತವಾಗಿದೆ. ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

Advertisement

ಗದಗ ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯ, ಕನ್ನಡ ಪರ ಸಂಘಟನೆ, ರೈತ ಸಂಘಟನೆ, ಜೈನ ಸಮುದಾಯ, ಆಟೋ ಸೇನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, ಇನ್ನೂ ಈ ಪ್ರತಿಭಟನೆಯಲ್ಲಿ  ಗದಗನ ಶ್ರೀ ಮುಕ್ಕಣ್ಣೇಶ್ವರ ಸ್ವಾಮೀಜಿ ಪಾಲ್ಗೊಂಡು ಮಾತನಾಡಿದರು. ಹಿಂದೂಗಳು ಹಿಂದೂಗಳಿಗೆ ಶತ್ರುವಾದಂತಾಗಿದೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು, ಆದರೆ ಅವಳ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಹಾನಿ ಮಾಡುವ ಕೆಲಸ ನಡೆಯುತ್ತಿದೆ.

ಸರ್ಕಾರ ಎಸ್‌ಐಟಿ ತನಿಖೆ ಮಾಡುತ್ತಿದೆ, ವರದಿ ಬರಲಿ. ನ್ಯಾಯಾಂಗ ತನ್ನ ಕೆಲಸವನ್ನು ತಾನೇ ಮಾಡುತ್ತೆ ಎಂದು ಹೇಳಿದರು. ಅದಲ್ಲದೆ  ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಜಾತಿ, ಮತವನ್ನು ಬಿಟ್ಟು ಹಿಂದೂಗಳು ಒಂದಾಗಬೇಕು. ಸರ್ಕಾರ ಮಾಡಲು ಆಗದ ಕೆಲವನ್ನು ಧರ್ಮಾಧಿಕಾರಿಗಳು ಮಾಡಿದ್ದಾರೆ. ಗೊಬ್ಬರ ಸ್ಟಾಕ್ ಇದ್ದರೆ ಸಾಕ್ಷಿ ಕೇಳುತ್ತಾರೆ, ಆದರೆ ನೂರಾರು ಹೆಣ ಹೊತು ಹಾಕಿದ್ದೇನೆ ಎಂದರೆ ನಂಬುತ್ತಾರೆ. ಅಪಪ್ರಚಾರ ಮಾಡುವವರನ್ನು ತಕ್ಷಣ ಬಂಧಿಸಬೇಕು, ಇಲ್ಲವಾದರೆ ಕ್ರಾಂತಿ ಆಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here