ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್ನಲ್ಲಿ ಪಿಜಿಯಲ್ಲಿದ್ದ ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದೋಚಿದ ಘಟನೆ ಜರುಗಿದೆ.
Advertisement
ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಮಧ್ಯಾಹ್ನ ಊಟಕ್ಕೆಂದು ರೂಮಿಗೆ ಬಂದಿದ್ದಾರೆ. ಪಿಜಿಯಲ್ಲಿನ ಮೂರನೇ ಮಹಡಿಯಲ್ಲಿರೋ ತನ್ನ ರೂಮಿಗೆ ಬಂದಾಗ, ಡೋರ್ ಬಡಿದ ಶಬ್ದ ಕೇಳಿ ಪಿಜಿಯವರು ಇರಬಹುದು ಎಂದು ಡೋರ್ ಓಪನ್ ಮಾಡಿದ್ದರು.
ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಆರೋಪಿ ಆಕೆಯ ಅಂಗಾಂಗಗಳನ್ನ ಮುಟ್ಟಿ, ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಆಕೆಯ ಬೆಡ್ ಮೇಲಿದ್ದ ಎರಡು ಮೊಬೈಲ್ಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಶೋಧ ಮುಂದುವರಿದಿದೆ.