ವಿಜಯಸಾಕ್ಷಿ ಸುದ್ದಿ, ಮುಳಗುಂದ: ಐತಿಹಾಸಿಕ ಸ್ಮಾರಕಗಳು ದೇಶದ ಅಮೂಲ್ಯ ಸ್ವತ್ತುಗಳಾಗಿದ್ದು. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಾಹಿತಿ ಬಿ.ಕೆ. ಹರಪನಹಳ್ಳಿ ಹೇಳಿದರು.
ಅವರು ಪಟ್ಟಣದ ನಗರೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ರಾಘವೇಂದ್ರ ಸ್ವಾಮಿಗಳು 16ನೇ ಶತಮಾನದ ಸಂತರು. ಇವರು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ದೈವಿಕ ಶಕ್ತಿ ಹೊಂದಿರುವ ಸಂತರಾಗಿದ್ದರು. ಇತಿಹಾಸದ ಅರಿವು ಭವಿಷ್ಯದ ಭವ್ಯ ಸಂಸ್ಕೃತಿಯ ಸೃಷ್ಟಿಗೆ ನೆರವಾಗುತ್ತದೆ. ಹೀಗಾಗಿ ನಮ್ಮ ಸುತ್ತಲಿನ ಪರಂಪರಾನುಗುತವಾದ ದೇವಾಲಯಗಳನ್ನು ಹಾಗೂ ವಾಸ್ತು ಶೀಲ್ಪವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದರು.
ಈ ಸಂದರ್ಭದಲ್ಲಿ ರಾಮಣ್ಣಾ ಕಮಾಜಿ, ಪ.ಪಂ ಸದಸ್ಯ ಇಮ್ಮಣ್ಣಾ ಶೇಖ, ಅಶೋಕ ಸೋನಗೋಜಿ, ಮನ್ಸೂರ ಹಣಗಿ, ವೆಂಕಟೇಶ, ಮಾಲತಿ, ಉಮೇಶ ಪಾಟೀಲ, ಅಜೀತ ಪೂಜಾರ, ಕಾರ್ತಿಕ ಹೊಸರಕರ, ಮಂಜುನಾಥ ಕಾಗಿ, ಬ್ರಾಹ್ಮಣ ಸಮಾಜದ ಗುರು-ಹಿರಿಯರು ಇದ್ದರು.