ಬೀದರ್: 79ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತವಾಗಿ ಶುಕ್ರವಾರ ಬೆಳಗ್ಗೆ ಬೀದರ್ ನಗರದ ಶ್ರೀಸಾಯಿ ಆದರ್ಶ ಶಿಕ್ಷಣ ಸಂಸ್ಥೆ, ಜೆಡಿಎಸ್ ಜಿಲ್ಲಾ ಕಛೇರಿ ಸೇರಿದಂತೆ ವಿವಿಧೆಡೆ ನಡೆದ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಈ ವೇಳೆ ಶುಭ ಕೋರಿ ಮಾತನಾಡಿದ ಅವರು, ಇವತ್ತು ನಾವೆಲ್ಲರೂ ಸ್ವಾತಂತ್ರ್ಯ ಭಾರತದಲ್ಲಿ ಇದ್ದಿವಿ. ನಮ್ಮ ಹಿರಿಯರೆಲ್ಲರೂ ತಮ್ಮ ಶ್ರಮ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಕೊಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬಾಳಬೇಕು. ನಮ್ಮ ದೇಶವನ್ನು ಇನ್ನೂ ಮುಂಚೂಣಿಗೆ ತರುವ ಕೆಲಸವನ್ನು ನಮ್ಮ ಮನೆಗಳಿಂದಲೇ ಆರಂಭ ಮಾಡಬೇಕು ಎಂದರು.
ಸ್ವಾತಂತ್ರ್ಯ ದಿನಾಚರಣೆ ಎಂಬುವುದು ರಾಷ್ಟ್ರೀಯ ಹಬ್ಬವಾಗಿದೆ. ಈ ಹಬ್ಬವನ್ನು ರಾಷ್ಟ್ರದ ಜನತೆ ಜಾತಿ, ಧರ್ಮಗಳ ಬೇಧ – ಭಾವ ತೊರೆದು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ.ಮಹಾತ್ಮರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಅವರುಗಳ ಜೀವನಾದರ್ಶವನ್ನು ನಮ್ಮ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಒಳಿತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಶ್ರೀಸಾಯಿ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಾಬುರಾವ್ ಮಲ್ಕಾಪೂರೆ, ಶಾಮರಾವ್, ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು. ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಗೆ, ನಗರಾಧ್ಯಕ್ಷ ಸುದರ್ಶನ್ ಸುಂದರರಾಜ್, ಪ್ರಮುಖರಾದ ರಾಜಶೇಖರ್ ಜವಳೆ, ದೇವೇಂದ್ರ ಸೋನಿ, ಸಜ್ಜದ್ ಸಾಹೇಬ್, ಐಲಿಜಾನ್ ಮಠಪತಿ, ಬೊಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜೆ, ಮನೋಹರ್ ದಂಡೆ, ಸಲಿಂ ಚಿಕಾನ್, ಜಾನ್ಸನ್ ಕಪಲಾಪೂರೆ, ಸೈಯದ್ ಪಾರುಕ್ ಅಲಿರವರು ಸೇರಿದಂತೆ ಅನೇಕರಿದ್ದರು.