ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪು ಮುಚ್ಚಿ ಹಾಕುವುದು ಬಿಜೆಪಿ ಕೆಲಸ: ಸಂತೋಷ್ ಲಾಡ್!

0
2nd quarter KDP progress review meeting
Spread the love

ಧಾರವಾಡ:- ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪು ಮುಚ್ಚಿ ಹಾಕುವುದು ಬಿಜೆಪಿ ಕೆಲಸ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, 2004 ರಿಂದ 2025 ರವರೆಗೆ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ ಎಂದು ಕಿಡಿಕಾರಿದರು.

ಮತಗಳ್ಳತನದ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿದೆ. 65 ಲಕ್ಷ ಮತಗಳು ಬಿಹಾರದಲ್ಲಿ ಎಸ್‌ಐಆರ್ ಮುಖಾಂತರ ಡಿಲಿಟ್ ಆಗಿವೆ. ಬಿಹಾರದಲ್ಲಿ 8 ಕೋಟಿ ಜನಸಂಖ್ಯೆ ಇದೆ. ಅಲ್ಲಿ 65 ಲಕ್ಷ ಮತ ಡಿಲೀಟ್ ಮಾಡಿದ್ದಾರೆ. ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇವೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಭಾರತೀಯರ ಹಕ್ಕಿಗಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಅವರು ಬಂದು ಮಾತನಾಡೋದು ಏನಿದೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕಾಲದಲ್ಲಿ 25 ದಿನಗಳಲ್ಲಿ ಚುನಾವಣೆ ಮುಗಿಸುತ್ತಿದ್ದೆವು. ಇವರ ಕಾಲದಲ್ಲಿ 90 ದಿನಗಳವರೆಗೆ ಚುನಾವಣೆ ನಡೆಯುತ್ತಿವೆ. 2004 ರಿಂದ 2025 ರಲ್ಲಿ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ. ಒಂದು ಡಿಜಿಟಲ್ ಫಾರ್ಮೆಟ್‌ನಲ್ಲಿ ಮತದಾರರ ಪಟ್ಟಿ ಸಿದ್ಧ ಮಾಡಲು ಆಗುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪುಗಳನ್ಮು ಮುಚ್ಚಿ ಹಾಕಿಕೊಳ್ಳೋದು ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here