ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಖಂಡ ಭಾರತದ ಸಂಕಲ್ಪಕ್ಕಾಗಿ ಹಿಂದೂಗಳ ಮನಸ್ಸುಗಳು ಒಗ್ಗೂಡಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಆ. 14ರ ಮಧ್ಯರಾತ್ರಿ ಶ್ರೀ ರಾಮಸೇನಾ ತಾಲೂಕು ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜಯಂತಿ ಆಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ಯುವ ಜನತೆ ದುಶ್ಚಟಗಳಿಂದ ದೂರವಿದ್ದು ದೇಶ, ಧರ್ಮದ ಬಗ್ಗೆ ಅಭಿಮಾನ-ಸ್ವಾಭಿಮಾನ ಹೊಂದಿ, ಆ ನಿಟ್ಟಿನಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದರು.
ಶ್ರೀರಾಮ ಸೇನಾ ತಾಲೂಕಾ ಅಧ್ಯಕ್ಷ ಈರಣ್ಣ ಪೂಜಾರ ಮಾತನಾಡಿ, ಅಖಂಡ ಭಾರತ ನಿರ್ಮಾಣಕ್ಕೆ ಸಮಸ್ತ ಹಿಂದೂಗಳ ಮನಸ್ಸುಗಳು ಒಂದಾಗಬೇಕು ಎಂದರು.
ಈ ವೇಳೆ ವಿಜಯಕುಮಾರ ಹತ್ತಿಕಾಳ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಮುತ್ತು ಕರ್ಜಕಣ್ಣವರ, ಮುರುಗೇಂದ್ರ ಸ್ವಾಮಿ ಹಿರೇಮಠ, ಸಂತೋಷ ಜಾವೂರ, ಪ್ರಾಣೇಶ ವ್ಯಾಪಾರಿ, ಅಮಿತ್ ಗುಡಿಗೇರಿ, ಹರೀಶ ಕಟ್ಟಿಮನಿ, ಕಿರಣ ಚಿಲ್ಲೂರಮಠ, ಹನಮಂತ ರಾಮಗೇರಿ, ಚಿನ್ನು ಹಾಳತೋಟದ, ಪ್ರವೀಣ ಬನ್ನಿಕೊಪ್ಪ, ಚಂದ್ರು ಕರ್ಜಕಣ್ಣವರ, ಆದೇಶ ಸವಣೂರ, ಹರೀಶ ಗೋಸಾವಿ, ಮುತ್ತು ಗೋಜನೂರ, ರಮೇಶ ಸಂಶಿ ಸೇರಿ ಕಾರ್ಯಕರ್ತರು ಇದ್ದರು. ಪಟ್ಟಣದ ಪರ್ವತ ಮಲ್ಲಯ್ಯ ದೇವಸ್ಥಾನದಲ್ಲಿಯೂ ಅಮರೇಶ ಗಾಂಜಿ ನೇತೃತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು.