ಬೀದಿ ನಾಯಿಗಳ ಕಾಟ ತಪ್ಪಿಸಿ

0
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಹರಪನಹಳ್ಳಿ ಪಟ್ಟಣದ ಅಯ್ಯನಕೆರೆಯನ್ನು ಪುನರುಜ್ಜೀವನಗೊಳಿಸಲು ಅವಶ್ಯಕ ಕಾಮಗಾರಿ ಆರಂಭಿಸಲು ವಿಸ್ತ್ರುತ ಯೋಜನಾ ವರದಿಯನ್ನು ತಯಾರಿಸಲು ಕೌನ್ಸಿಲ್ ಸಭೆ ಮಂಜೂರಾತಿ ನಿರೀಕ್ಷಣೆ ಮೇರೇಗೆ ನೀಡಿರುವ ಅನುಮೋದನೆಯನ್ನು ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.

Advertisement

ಹರಪನಹಳ್ಳಿ ಪಟ್ಟಣದ ಪುರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ವಿವಿಧ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಪಟ್ಟಣದ ಕೊಟ್ಟೂರು ರಸ್ತೆಯ ನಂಜನಗೌಡ ಬಡಾವಣೆಯಲ್ಲಿ ಪುರಸಭೆಯ ಕನಿಷ್ಠ 1 ಎಕರೆ ಜಾಗವಿದೆ. ಈವರೆಗೂ ವಿವಿಧ ಸಂಘ-ಸಂಸ್ಥೆಗಳಿಗೆ ಜಾಗ ನೀಡಿದ್ದೇವೆ, ಅಲ್ಲಿರುವ ಜಾಗವನ್ನು ನಮ್ಮ ಪುರಸಭೆಯ ನೌಕರರಿಗೆ ಕ್ವಾಟ್ರರ್ಸ್ ನಿರ್ಮಿಸಲು ಮೀಸಲಿಟ್ಟು ಅನುದಾನ ಒದಗಿಸಬೇಕು ಎಂದು ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹೇಳಿದಾಗ ಸಭೆ ಒಪ್ಪಿಗೆ ನೀಡಿತು.

ಬೀದಿ ನಾಯಿಗಳ ಕಾಟ ಪಟ್ಟಣದಲ್ಲಿ ಜಾಸ್ತಿಯಾಗಿದೆ. ಇದಕ್ಕೆ ಶೀಘ್ರವೇ ಕಡಿವಾಣ ಹಾಕಬೇಕು ಹಾಗೂ ಮಳೆಯಿಂದ ಕೋರಿಹುಳುಗಳ ಕಾಟ ಸಹ ಹೆಚ್ಚಾಗಿದೆ ಎಂದು ಸದಸ್ಯ ಜಾಕೀರ ಹುಸೇನ್ ಪ್ರಸ್ತಾಪಿಸಿದಾಗ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್, ನಾಯಿಗಳ ಕಾಟ ತಪ್ಪಿಸಿ ಹಾಗೂ ಕೋರಿಹುಳಗಳಿಗೆ ಔಷಧಿ ಸಿಂಪಡಿಸಿ ನಾಶ ಮಾಡಿ ಎಂದು ಸಲಹೆ ನೀಡಿದರು.

ನಾಮನಿರ್ದೇಶಿತ ಸದಸ್ಯೆ ಸುಮಾ ಜಗದೀಶ, ಸದಸ್ಯ ಜಾವೇದ್ ಅಗತ್ಯ ಸಲಹೆ-ಸೂಚನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ದಾರ ಗಣೇಶ, ವಸಂತಪ್ಪ, ಹೇಮಣ್ಣ ಮೋರಗೇರಿ, ತಾರ ಹನುಮಂತಪ್ಪ, ಶೋಭಾ, ಗೊಂಗಡಿ ನಾಗರಾಜ, ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಪಾದ್ಯಕ್ಷ ಎಚ್. ಕೊಟ್ರೇಶ, ಇಂಜಿನಿಯರ್ ಸಿದ್ದೇಶ, ಆರೋಗ ನಿರೀಕ್ಷಕ ಮಂಜುನಾಥ ಉಪಸ್ಥಿತರಿದ್ದರು.

ಪಟ್ಟಣದ ಸುಣಗಾರಗೇರಿಯಲ್ಲಿರುವ ಎಸ್‌ಎಚ್‌ಡಿ ಶಾಲೆ ಬಳಿ ಶೌಚಾಲಯ ನಿರ್ಮಿಸಬೇಕು ಎಂದು ಸದಸ್ಯೆ ಶೋಭಾ ಒತ್ತಾಯಿಸಿದರು. ಪಟ್ಟಣದ ಪುರಸಭೆ ಬಳಿ ನಿರ್ಮಿಸುತ್ತಿರುವ ದಿನವಹಿ ಮಾರುಕಟ್ಟೆ ಕಾಮಗಾರಿ ಹಾಗೂ ಡಿವೈಡರ್ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿ ಎಂದು ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ಗಮನ ಸೆಳೆದರು.


Spread the love

LEAVE A REPLY

Please enter your comment!
Please enter your name here