ಬೆಳಗಾವಿ:- ಕೆ. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Advertisement
ರಾಜಕೀಯ ವಿಷಯದ ಕುರಿತು ಏನೂ ಚರ್ಚೆ ಬೇಡ ಎಂದು ಹೇಳಿದ ಅವರು, ನಾಳೆ ನಾಡಿದ್ದು ಸಮಯ ಇದೆ. ಇವತ್ತು ಒಂದು ದಿನ ಬೆಡ್ ರೆಸ್ಟ್ ಇದೆ ಎಂದಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಆಗುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ಏನು ಬರುತ್ತದೋ ಅದೇ ಅಂತಿಮ ಎಂದು ತಿಳಿಸಿದರು.