ಚಿನ್ನದ ಬೆಲೆ ದಿನ ದಿನೇ ಏರಿಕೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನ ಅನ್ನೋದು ಬೆಲೆ ಬಾಳುವ ವಸ್ತುವಾಗಿದ್ದು, ಹೂಡಿಕೆಗೂ ಅತ್ಯಮೂಲ್ಯವಾಗಿದೆ. ಈ ವರ್ಷ ಚಿನ್ನ ಮಾಡಿಸಿ ಮುಂದಿನ ವರ್ಷ ಅದನ್ನು ಮಾರಿದರೂ ಒಳ್ಳೆ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೂ ಇದನ್ನು ಖರೀದಿಸುವವರ ಸಂಖೆ ಹೆಚ್ಚಾಗಿದೆ.
Advertisement
ಕಳೆದ ನಾಲ್ಕು ದಿನಗಳ ಹಿಂದಷ್ಟೇ ದಾಖಲೆಯ ಮಟ್ಟಕ್ಕೆ ಏರಿದ ಚಿನ್ನದ ಬೆಲೆ ಕೊಂಚ ಕಡಿಮೆ ಆಗಿದೆ. ಇಂದು ಬೆಳಗ್ಗೆ 6 ಗಂಟೆಯವರೆಗೆ ದಾಖಲಾದ ಬೆಲೆಗಳ ಪ್ರಕಾರ.. ದೇಶೀಯವಾಗಿ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾದರೆ, ಬೆಳ್ಳಿಯ ಬೆಲೆ ಸ್ವಲ್ಪ ಹೆಚ್ಚಾಗಿದೆ.
- 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆ ಆಗಿದೆ. ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 1,01,230 ರೂಪಾಯಿ ತಲುಪಿದೆ.
- 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆಯಾಗಿ 92,790 ರೂಪಾಯಿಗೆ ತಲುಪಿದೆ
- ಬೆಳ್ಳಿ ಬೆಲೆ ಪ್ರತಿ ಕೆಜಿಗೆ 100 ರೂಗಳಷ್ಟು ಏರಿಕೆಯಾಗಿ 1,16,200 ರೂ.ಗಳಿಗೆ ತಲುಪಿದೆ
- ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್‌ನ ಚಿನ್ನದ ಬೆಲೆ 92,790 ರೂ. ಒಂದು ಕಿಲೋ ಬೆಳ್ಳಿಯ ಬೆಲೆ 1,26,200 ರೂಪಾಯಿ ಆಗಿದೆ.
- ವಿಶಾಖಪಟ್ಟಣದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್ ಚಿನ್ನದ ಬೆಲೆ 92,790 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 1,26,200 ರೂ.
- ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,380 ರೂ. 22 ಕ್ಯಾರೆಟ್ ಚಿನ್ನದ ಬೆಲೆ 92,940 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 1,16,200 ರೂ.
- ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ. 22 ಕ್ಯಾರೆಟ್ ಚಿನ್ನದ ಬೆಲೆ 93,790 ರೂ. ಬೆಳ್ಳಿ ಬೆಲೆ ಕೆಜಿಗೆ 1,16,200 ರೂ.
- ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,01,230 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 92,790 ರೂ.ಗಳಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ 1,26,200 ರೂ.ಗಳಾಗಿದೆ.
- ಬೆಂಗಳೂರಿನಲ್ಲಿ 24 ಕ್ಯಾರೆಟ್ ಬೆಲೆ 1,01,230 ರೂ. 22 ಕ್ಯಾರೆಟ್ ಬೆಲೆ 92,790 ರೂ. ಬೆಳ್ಳಿ ಬೆಲೆ ಕೆಜಿಗೆ 1,16,200 ರೂಪಾಯಿ ಆಗಿದೆ.