`ಜೀವಮಾನ ಸಾಧನೆ’ ಪ್ರಶಸ್ತಿ ಪುರಸ್ಕೃತರು ಇವರು!

0
Spread the love

ಚಂದ್ರು ಜ.ಬಾಳಿಹಳ್ಳಿಮಠ

Advertisement

ಮೂಲತಃ ಕೃಷಿ ಕುಟುಂಬದವರು. ಲಕ್ಷ್ಮೇಶ್ವರ ಹಾಗೂ ಗದಗ ನಗರದಲ್ಲಿ ತಮ್ಮದೇ ಆದ ವಿಶೇಷ ಛಾಪನ್ನು ಮೂಡಿಸಿ, ವ್ಯಾಪಾರದಲ್ಲಿ ನಿಷ್ಠೆಯ ದುಡಿಮೆಯಿಂದ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸಿಕೊಂಡು ರೈತರ ಹಾಗೂ ವ್ಯಾಪಾರಿಗಳ ಗೌರವಕ್ಕೆ ಪಾತ್ರರಾಗಿದ್ದ ಲಿಂ. ಜಯದೇವಯ್ಯ (ಜಯಣ್ಣ)ನವರ ಮೂರನೇ ಸುಪುತ್ರ ಮಿತಭಾಷಿ ಚಂದ್ರು ಬಾಳಿಹಳ್ಳಿಮಠರು.

ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ವಿದ್ಯಾದಾನ ಸಮಿತಿ ಗಂಡು ಮಕ್ಕಳ ಶಾಲೆಯಲ್ಲಿ ಪೂರೈಸಿ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪದವಿಯನ್ನು ಪಡೆದು, ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಎರಡು ವರ್ಷ ಅಭ್ಯಸಿಸಿ ವ್ಯಾಪಾರದಲ್ಲಿ ತೊಡಗಿಸಿಕೊಂಡರು.

ಕುಟುಂಬ ವ್ಯಾಪಾರವಾದ ದಲಾಲಿ ಅಂಗಡಿಯ ಜೊತೆ ಮೆ|| ಬಾಳಿಹಳ್ಳಿಮಠ & ಕಂ ಎಂಬ ಸ್ಟಾಕಿಸ್ಟ್ & ಡಿಸ್ಟ್ರಿಬ್ಯೂಟರ್ಸ್‌ ಹೊಸ ವ್ಯಾಪಾರವನ್ನು 1986ರಲ್ಲಿ ಪ್ರಾರಂಭಿಸಿ ಅದರ ಮೂಲಕ ಪ್ರಮುಖ ಕಂಪನಿಗಳ ವಿತರಕರಾಗಿ ವ್ಯವಹಾರವನ್ನು ಮಾಡತೊಡಗಿದರು. ಹುಬ್ಬಳ್ಳಿ ಸ್ಟಾಕ್ ಟ್ರೇಡಿಂಗ್ ಸದಸ್ಯರಾಗಿ ಷೇರು ಮಾರುಕಟ್ಟೆ ಪ್ರವೇಶಿಸಿ ಷೇರು ವ್ಯವಹಾರವನ್ನು ಮಾಡಿದರು. ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿಯ ವಿತರಕರಾಗಿಯೂ ವ್ಯವಹಾರವನ್ನು ವಿಸ್ತರಿಸಿದ್ದಾರೆ.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ 1987ರಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, 2004-2005ನೇ ಸಾಲಿನ ಸಂಸ್ಥೆಯ ಚಿಕ್ಕ ವಯಸ್ಸಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರಾಗಿ 6 ವರ್ಷ ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಗದಗ ಒಣಮೆಣಸಿನಕಾಯಿ ದಲಾಲ ಹಾಗೂ ಖರೀದಿ ವರ್ತಕರ ಸಂಘದ ಅಧ್ಯಕ್ಷರಾಗಿ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಆಗಮಿಸುತ್ತಿರುವ ಮಂಜುನಾಥ ಇಂಜಿನಿಯರಿಂಗ್ ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಪಾಟೀಲ ಗುಜರಾತ್ ರಾಜ್ಯಕ್ಕೆ ಹೋಗಿ ದೊಡ್ಡ ಉದ್ಯಮವನ್ನು ಪ್ರಾರಂಭಿಸುವುದರ ಮುಖಾಂತರ ಹೊಸ ಹೊಸ ರೋಸ್ಟರ್ ಯಂತ್ರಗಳನ್ನು ತಯಾರಿಸುತ್ತಾರೆ. ಅವು ರಾಷ್ಟ್ರ ವ್ಯಾಪ್ತಿ ಮೆಚ್ಚುಗೆಯನ್ನು ಪಡೆದುಕೊಂಡಿವೆ.

ಕಾರ್ಖಾನೆಯ ಗಾತ್ರ ಮತ್ತು ಹುರಿಯಲು ಬೇಕಾದ ಆಹಾರ ಪ್ರಮಾಣ ಏನೇ ಇರಲಿ, ಅದಕ್ಕೆ ತಕ್ಕಂತೆ ಮಂಜುನಾಥ ಇಂಜಿನಿಯರಿಂಗ್‌ನವರು ನಮಗೆ ಬೇಕಾದಂತೆ ಸರಿಹೊಂದುವ ಯಂತ್ರವನ್ನು ತಯಾರಿಸಿಕೊಡುತ್ತಾರೆ. ಗಂಗಾಧರ ಪಾಟೀಲರು ಒಂದು ಸಣ್ಣ ಉಪಕ್ರಮ ಮತ್ತು ಕೆಲವೇ ಜನರ ಸಂಪನ್ಮೂಲ ಸಹಾಯದಿಂದ ರೋಸ್ಟ್ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಇಂದು ಅನೇಕ ಸಹೋದ್ಯೋಗಿಗಳೊಂದಿಗೆ ಎಲ್ಲಾ ರೀತಿಯ ಹುರಿಯುವ ಆಹಾರ ಸಾಮಗ್ರಿಗಳಿಗೆ ರೋಸ್ಟರ್ ಯಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಇದು ಈಗ ಭಾರತದ ಪ್ರತಿಯೊಂದು ದಿಕ್ಕಿನಲ್ಲಿ ಹಾಗೂ ನೇಪಾಳದಂತಹ ನೆರೆಯ ರಾಷ್ಟ್ರಗಳಲ್ಲಿ ಪ್ರಸಿದ್ಧಿಯಾಗಿದೆ.

ಪೂರ್ಣಿಮಾ ಕೋಕೋನಟ್ ಪ್ರೊಡಕ್ಟಸ್ ಪ್ರೈ, ಲಿ, ಶಿರಸಿಯ ವ್ಯವಸ್ಥಾಪಕ ನಿರ್ದೇಶಕ

ಅಶೋಕ ಪಿ.ಹಬೀಬ ಮೂಲತಃ ಗದುಗಿನವರು. ಇವರು ಪದವಿಪೂರ್ವ ಶಿಕ್ಷಣವನ್ನು ಗದಗದ ಜೆ.ಟಿ. ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾದ ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾರ್ಕೆಟಿಂಗ್ ಮತ್ತು ಉತ್ಪಾದನಾ ನಿರ್ವಹಣೆಯಲ್ಲಿ ಎಂ.ಬಿ.ಎ ಪದವಿ ಪಡೆದರು. 1992ರಲ್ಲಿ ಶಿರಸಿಯಲ್ಲಿ ಮೆ. ಎಸ್. ಪೂರ್ಣಿಮಾ ಕೋಕೋನಟ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಮತ್ತು 2020ರಲ್ಲಿ ಹೊನ್ನಾವರದಲ್ಲಿ ತ್ರಿವೇಣಿ ಕೋಕೋನಟ್ ಪ್ರಾಡಕ್ಟ್ ಅನ್ನು ಸ್ಥಾಪಿಸಿದರು.

ಇಂದು ಅವರು ಸುಮಾರು 80 ಜನರಿಗೆ ಉದ್ಯೋಗವನ್ನು ಒದಗಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು. 2013ರಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿಂದ ವಾಂಜಿಯ ರತ್ನ ಪ್ರಶ್ತಿಯನ್ನು ಪಡೆದಾಗ ಉದ್ಯಮಕ್ಕೆ ಅವರು ಕೊಡುಗೆಗಳನ್ನು ಗುರುತಿಸಲಾಯಿತು. ಇವೆಲ್ಲದರ ಹೊರತಾಗಿ ಅವರು ಒಬ್ಬ ಶ್ರದ್ಧಾವಂತ ಯೋಗಾಭ್ಯಾಸಿ. ಉದ್ಯಮಶೀಲತೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದನ್ನು ಆನಂದಿಸುತ್ತಾರೆ. ಇವರು ಗದಗ ಜಿಲ್ಲೆಯಲ್ಲಿ ಜನಿಸಿ ಬೇರೆ ಜಿಲ್ಲೆ ಅಥವಾ ರಾಜ್ಯದಲ್ಲಿ ದೊಡ್ಡ ಉದ್ದಿಮೆಯನ್ನು ಸ್ಥಾಪಿಸಿ ಉದ್ದಮೆಯನ್ನು ಬೆಳೆಸಿ ನಮ್ಮ ಜಿಲ್ಲೆಗೆ ಹೆಸರು ತಂದಿದ್ದಾರೆ.

ಇವರೆಲ್ಲರೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಗದಗ ಉತ್ಸವ-2025ರಲ್ಲಿ ವಿಶೇಷ ಸನ್ಮಾನಿತರಾಗಿ ಆಗಮಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here