ನಟಿ ಕಂಗನಾ ರನೌತ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಜೊತೆಗೆ ಬಿಜೆಪಿ ಸಂಸದೆಯೂ ಹೌದು. ಕಂಗನಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಯ ವಿಷಯಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ವೈಯಕ್ತಿಯ ಜೀವನದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಕಂಗನಾ ತಮ್ಮ ಡೇಟಿಂಗ್ ಜೀವನ ಮತ್ತು ಲಿವ್-ಇನ್ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕಂಗನಾ ಅವರಿಗೆ ಮದುವೆಯ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಟಿ, ‘ನಾನು ಇನ್ನೂ ಮದುವೆಯಾಗಿಲ್ಲ ಎಂದು ನಿಮಗೆ ಹೇಗೆ ಗೊತ್ತು. ನೀವು ನನ್ನನ್ನು ತಿಳಿದಿದ್ದೀರಿ ಎಂದು ಭಾವಿಸಬೇಡಿ…’ ಎಂದು ತಮಾಷೆಗೆ ಹೇಳಿದ ನಟಿ ಬಳಿಕ ನಗಲು ಆರಂಭಿಸಿದರು.
‘ಮದುವೆ ನನ್ನ ಲಿಸ್ಟ್ನಲ್ಲಿ ಇದೆ. ಈಗಾಗಲೇ ತಡವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗಲಿದ್ದೇನೆ’ ಎಂದು ಕಂಗನಾ ಹೇಳಿದರು. ಅಷ್ಟೇ ಅಲ್ಲ, ಮದುವೆಯಾಗಲು ಕುಟುಂಬದಿಂದ ಸಾಕಷ್ಟು ಒತ್ತಡವಿದೆ, ಆದರೆ ಎಲ್ಲವೂ ಆಗಲು ಒಂದು ನಿಗದಿತ ಸಮಯವಿದೆ ಎಂದು ನಟಿ ಹೇಳಿದ್ದಾರೆ.
ಇದೇ ವೇಳೆ ಲಿವ್ ಇನ್ ಸಂಬಂಧಗಳ ಬಗ್ಗೆ ಮಾತನಾಡಿದ ನಟಿ, ‘ಮದುವೆ ಎಂಬುದು ಜೀವನದಲ್ಲಿ ನಡೆಯುವ ಒಂದು ಒಳ್ಳೆಯ ವಿಷಯ. ಆದರೆ ಇಂದಿನ ಪೀಳಿಗೆ ಲಿವ್-ಇನ್ ಸಂಬಂಧಗಳಲ್ಲಿ ಹೆಚ್ಚು ನಂಬಿಕೆ ಇಡುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರ ಕಲ್ಯಾಣಕ್ಕೆ ಒಳ್ಳೆಯದಲ್ಲ. ನಾನು ಎಂದಿಗೂ ಲಿವ್-ಇನ್ ಸಂಬಂಧದಲ್ಲಿ ಇರಲಿಲ್ಲ’ ಎಂದಿದ್ದಾರೆ.
‘ಲಿವ್-ಇನ್ ಸಂಬಂಧದಲ್ಲಿರುವ ಯುವತಿಯರು ಗರ್ಭಿಣಿಯಾಗುತ್ತಾರೆ, ನಂತರ ಗರ್ಭಪಾತ ಮಾಡಿಸಿಕೊಳ್ಳಬೇಕಾಗುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರಿಗೆ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಕಂಗನಾ ಹೇಳಿದ್ದಾರೆ.