ಅಮೂಲ್ಯ ಜೀವ ಉಳಿಸಲು ರಕ್ತದಾನ ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವ್ಯಕ್ತಿಗೆ ರಕ್ತ ನೀಡಿದಾಗ ಒಂದು ಅಮೂಲ್ಯ ಜೀವ ಉಳಿಸಿದಂತಾಗುತ್ತದೆ. ಹೀಗಾಗಿ ರಕ್ತದಾನ ಶ್ರೇಷ್ಠವಾದ ದಾನವಾಗಿದೆ ಎಂದು ಬಿಜೆಪಿ ರೋಣ ಮಂಡಲ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಹೇಳಿದರು.

Advertisement

ಸಮೀಪದ ಜಕ್ಕಲಿ ಗ್ರಾಮದ 283ನೇ ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘ ಹಾಗೂ ಗದಗ ಶ್ರೀ ಬಸವೇಶ್ವರ ರಕ್ತ ಭಂಡಾರ ಇವರ ಸಹಭಾಗಿತ್ವದೊಂದಿಗೆ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಗದಗ ಚೈತನ್ಯ ನಗರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುನೀಲ ಕತ್ತಿ ಮಾತನಾಡಿ, ಎಚ್‌ಐವಿ ರೋಗ ಹೇಗೆ ಬರುತ್ತದೆ ಮತ್ತು ಅದನ್ನು ತಡೆಗಟ್ಟುವ ವಿಧಾನಗಳ ಕುರಿತು ತಿಳಿಸಿದರು.

ರೋಣ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಗ್ರಾ.ಪಂ ಸದಸ್ಯ ರಮೇಶ ಪಲ್ಲೇದ ಶಿಬಿರವನ್ನು ಉದ್ಘಾಟಿಸಿದರು.

ನ್ಯಾಯವಾದಿ ವಿದ್ಯಾಧರ ಶಿರಗುಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ತದಾನಿಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.

ಗದಗ ಬಸವೇಶ್ವರ ಬ್ಲಡ್ ಬ್ಯಾಂಕ್ ಆಡಳಿತಾಧಿಕಾರಿ ಅನಿಲಕುಮಾರ ಹಂದ್ರಾಳ, ವ್ಯವಸ್ಥಾಪಕ ಸುಭಾಸ ಕಾಲವಾಡ, ಉಮೇಶ ಮೇಟಿ, ವೀರಭದ್ರಪ್ಪ ಗಾಣಿಗೇರ, ಮುತ್ತಣ್ಣ ಪಾಟೀಲ, ಮಿಥುನ್ ಗಾಣಿಗೇರ ಸೇರಿದಂತೆ ಇನ್ನಿತರರು ಇದ್ದರು. ಶಿಬಿರದಲ್ಲಿ 64 ಜನ ರಕ್ತದಾನ ಮಾಡಿದರು.


Spread the love

LEAVE A REPLY

Please enter your comment!
Please enter your name here