ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕೋಟುಮಚಗಿ ಗ್ರಾಮದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಡಿಯಲ್ಲಿ ಭಜರಂಗದಳದಿಂದ ಸ್ವಾತಂತ್ರ್ಯ ದಿನದ ಮುನ್ನಾ ದಿನ ಮಧ್ಯರಾತ್ರಿ ಧ್ವಜಾರೋಹಣವನ್ನು ಮಾರುತಿ ಮಂದಿರದ ಬಯಲಿನಲ್ಲಿ ಆಚರಿಸಲಾಯಿತು.
ಧ್ವಜಾರೋಹಣದ ಮುಖ್ಯ ವಕ್ತಾರರಾಗಿ ರೋಣ ತಾಲೂಕಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಘುನಾಥ ಕೊಂಡಿ ಆಗಮಿಸಿ ಮಾತನಾಡಿ, ಭಾರತದಲ್ಲಿ ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿರುತ್ತಾರೋ ಅಲ್ಲಿಯವರೆಗೆ ಈ ದೇಶದಲ್ಲಿ ಜಾತ್ಯಾತೀತ ಎನ್ನುವ ಪದಕ್ಕೆ ಅರ್ಥವಿದೆ. ಹಿಂದೂ ಸಮಾಜ ಜಾಗೃತಗೊಳ್ಳದಿದ್ದರೆ ಜಾತ್ಯಾತೀತ ಕಲ್ಪನೆ ನಶಿಸಿ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಹೇಳಿದರು.
ಇಂದು ನಮ್ಮ ದೇಶ ಭಯೋತ್ಪಾದಕ ಶಕ್ತಿಗಳಿಂದ ನರಳುತ್ತಿದೆ. ಇದನ್ನು ಮೆಟ್ಟಿ ನಿಲ್ಲಬೇಕೆಂದರೆ ಈ ದೇಶದಲ್ಲಿರುವ ನಾವೆಲ್ಲರೂ ಒಂದು ಎಂಬ ಭಾವನೆ ಮೂಡಬೇಕಿದೆ. ಅದಕ್ಕೆ ಇಂತಹ ರಾಷ್ಟ್ರೀಯ ವೇದಿಕೆಗಳು ತಳಹದಿಯಾಗಬೇಕೆಂದು ಪ್ರತಿಪಾದಿಸಿದ ಕೊಂಡಿ, ದೇಶಾಭಿಮಾನದ ಕನಸನ್ನು, ಧೇಶಭಕ್ತಿಯನ್ನು ಮಕ್ಕಳಲ್ಲಿ ಇಂದಿನಿಂದಲೇ ಬಿತ್ತುವ ಕೆಲಸವನ್ನು ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ಶರಣಪ್ಪ ಚಿಗರಿ ವಹಿಸಿದ್ದರು. ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಪ್ಪ ಬಡಿಗೇರ, ಮುತ್ತು ನಿಡಗುಂದಿ, ಧರ್ಮರಾಜ ಅಣ್ಣಿಗೇರಿ, ಮಲ್ಲಿಕಾರ್ಜುನ ರಮಾಣಿ, ಚಂದ್ರಶೇಖರಯ್ಯ ಭೂಸನೂರಮಠ, ಶರಣಪ್ಪ ನೇಗಲಿ, ಮಂಜು ಕಿತ್ತೂರ, ಮಂಜುನಾಥ ಅಬ್ಬಿಗೇರಿ, ನಾಗಪ್ಪ ಗಾಣಿಗೇರ, ಗ್ರಾಮಸ್ಥರು ಪಾಲ್ಗೊಂಡಿದ್ದರು.