ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ವಿರುದ್ಧ ಶಾಸಕ ಜಿ ಎಸ್ ಪಾಟೀಲ ಆಕ್ರೋಶ!

0
Spread the love

ಗದಗ:- ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ವಿರುದ್ಧ ಶಾಸಕ ಜಿ ಎಸ್ ಪಾಟೀಲ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅವ್ರಿಗೆ ಬೇರೆ ಉದ್ಯೋಗವೇ ಇಲ್ಲ. ಎಸ್ ಐಟಿಗೆ ಪ್ರಕರಣವನ್ನು ಕೊಟ್ಟಾಗ ಮೊದಲೇ ಬಂದ್ ಮಾಡಿಸಬೇಕಿತ್ತು. ವಾತಾವರಣ ತಿಳಿ ಇರ್ತಿತ್ತು. ಧರ್ಮಸ್ಥಳ ಬಗ್ಗೆ ಗೌರವ ಹೆಚ್ಚಾಗುತ್ತಿತ್ತು. ದಾಖಲೆ ನೋಡಿ ಆಗ ಬಿಜೆಪಿ ಅವ್ರು ಸ್ವಾಗತ ಮಾಡಿದ್ದರು. ಈಗ ಬೇರೆ ತರ ಕಥೆ ಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಿ.ಎಲ್.ಪಿ ಸಭೆಯಲ್ಲಿ ಬಹುತೇಕ ಶಾಸಕರು ಸಿಎಂಗೆ ಒತ್ತಾಯ ಮಾಡಿದ್ದೇವೆ. ಹೇಗಾದ್ರೂ ಮಾಡಿ ಈ ಪ್ರಕರಣ ನಿಲ್ಲಿಸಿ. ಬೇಗ ಮುಕ್ತಾಯ ಮಾಡಬೇಕು ಎನ್ನುವುದು ನಮ್ಮ ಶಾಸಕಾಂಗ ಪಕ್ಷದ ಮುಖಂಡರದ್ದಾಗಿದೆ. ಧರ್ಮಸ್ಥಳದ ಬಗ್ಗೆ ನಮಗೆ ಬಹಳ ಗೌರವ ಇದೆ.

ಸರ್ಕಾರ ತನಿಖೆ ತಾನಾಗಿಯೇ ಪ್ರಾರಂಭ ಮಾಡಿಲ್ಲ.‌ ಯಾರೋ ಬಂದು ಕಂಪ್ಲೆಂಟ್ ಮಾಡಿದ ಮೇಲೆ ಸ್ವಾಭಾವಿಕವಾಗಿ ತನಿಖೆ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಬಿಜೆಪಿ ಸುಮ್ಮನ್ನಿತ್ತು. ಎಸ್.ಐ.ಟಿ ಮಾಡಿದ್ದಕ್ಕೆ ಸ್ವಾಗತ ಮಾಡ್ತಿವಿ ಅಂದ್ರು. ಈಗ ಯಾಕೆ ಅವರಿಗೆ ಅನುಮಾನ ಬಂದಿದೆ ಎಂದು ಕಿಡಿಕಾರಿದರು. ಒಟ್ಟಾರೆ ನಮ್ಮ ಶಾಸಕರು ಎಸ್ ಐಟಿ ತನಿಖೆಯಲ್ಲಿ ಏನೂ ಸಿಕ್ಕಿಲ್ಲ. ಮುಕ್ತಾಯ ಮಾಡಬೇಕು ಅನ್ನೋ ಒತ್ತಾಯ ಮಾಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಎದ್ದಾಕ್ಷಣ ಪ್ರತಿಯೊಬ್ಬರೂ ಧರ್ಮಸ್ಥಳ ಮಂಜುನಾಥನನ್ನು ನೆನೆಸಿಕೋಳ್ತೆವೆ. ಆದರೆ ಇತ್ತೀಚಿನ ಬೆಳವಣಿಗೆ ನೋವು ತಂದಿದೆ ಎಂದರು.

ಹಿಂದುತ್ವದ ಭಾವನೆ ರಾಜ್ಯದಲ್ಲಿ ಹಬ್ಬಿಸಬೇಕು ಅನ್ನೋ ಬಿಜೆಪಿ ವಿಚಾರವಾಗಿ ಮಾತನಾಡಿ, ಕೋಮು ಸೌಹಾರ್ದತೆ ಹಾಳು ಮಾಡೋದು ಬಿಜೆಪಿ ಕೆಲಸ. ಅದರ ಲಾಭ ಪಡೆಯೋದೆ ಬಿಜೆಪಿ ಸ್ಪಷ್ಟ ಉದ್ದೇಶ. ಪ್ರಕರಣ ಎಸ್.ಐ.ಟಿ ತನಿಖೆಗೆ ವಹಿಸಿದಾಗ ಬಿಜೆಪಿಯವ್ರು ಸ್ವಾಗತ ಮಾಡಿದ್ರು. ಇಂತಹ ಸಮಯದಲ್ಲಿ ಹಿಂದುತ್ವದ ವಿಚಾರ ರಾಜ್ಯದಲ್ಲಿ ಹರಡಿಸ್ಬೇಕು. ಸಮಾಜ ಹಾಳು ಮಾಡ್ಬೇಕು ಅದರಿಂದ ನಾವು ಲಾಭ ಪಡಿಬೇಕು ಎನ್ನುವುದು ಬಿಜೆಪಿಯವ್ರ ಕೆಲಸ. ಗೊಂದಲ ಬೇಗ ಮುಗಿಯಲಿ ಅನ್ನೋದು ನಮ್ ಆಸೆ ಎಂದು ಹೇಳಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here