ಗದಗ: ನಗರದ ವೀರಶೈವ ಲೈಬ್ರರಿ ಬಳಿಯಲ್ಲಿ 21 ದಿನಗಳ ಕಾಲ ಸುದರ್ಶನ ಚಕ್ರ ಯುವ ಮಂಡಳ ವತಿಯಿಂದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆ ನಿಮಿತ್ತ ಶನಿವಾರ ಸನಾತನ ಧರ್ಮದ ಪದ್ಧತಿಯಂತೆ ಗೋಪೂಜೆ ಮತ್ತು ಭೂಮಿ ಪೂಜೆಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರು, ಉತ್ಸವ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಹಿಂದೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
Advertisement