೫೦ನೇ ಪುಣ್ಯತಿಥಿಯ ಪುನರ್ ಸ್ಮರಣೆ ಕಾರ್ಯಕ್ರಮ

0
Spread the love

ಸುದ್ದಿ, ಗದಗ: ದಿ ಗುರುಬಸಪ್ಪ ಕಳಕಪ್ಪ ಪಲ್ಲೇದ ಮುಧೋಳ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ, ದಿ ಗುರುಬಸಪ್ಪ ಕಳಕಪ್ಪ ಪಲ್ಲೇದ ಇವರ ೫೦ನೇ ಪುಣ್ಯತಿಥಿಯ ಪುನರ್ ಸ್ಮರಣೆ ಕಾರ್ಯಕ್ರಮ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಪಿ. ಪಲ್ಲೇದ ಇವರ ಆತ್ಮಕಥನ ಗ್ರಂಥ ಬಿಡುಗಡೆ ಮತ್ತು ಕೆ.ಜಿ. ಪಲ್ಲೇದ ಬಿ.ಕಾಂ. (ಸಿ.ಎ) ತೆರಿಗೆ ಸಲಹೆಗಾರರು ಯಲಬುರ್ಗಾ ಇವರ ನೂತನ ಕಾರ್ಯಾಲಯ `ಸಾಯಿ ಅಸೋಸಿಯೇಟ್ಸ್’ ಇದರ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ ೧೮, ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಯಲಬುರ್ಗಾದ ಸಾಯಿ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ, ಹಾಲಿ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ.ಬ್ರ. ೧೦೮ ಪ.ಪೂ. ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಮ.ನಿ.ಪ್ರ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು, ಗದಗ ಹಾಲಿ ಕಾನೂನು ಜಿಲ್ಲಾಧಿಕಾರಿಗಳಾದ ಎಸ್.ಜಿ. ಪಲ್ಲೇದ ಇವರ ಕಾನೂನು ಸಲಹೆಗಾರರು ಮತ್ತು ಅಧ್ಯಕ್ಷರು ದಿ. ಗುರುಬಸಪ್ಪ ಕಳಕಪ್ಪ ಪಲ್ಲೇದ ಮುಧೋಳ ಕುಟುಂಬದ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಹಾಗೂ ಧಾರವಾಡ ಹೈಕೋರ್ಟ್ ವಕೀಲರಾದ ಎಸ್.ಹೆಚ್. ಮಿಟ್ಟಲಕೋಡ ಧಾರವಾಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು, ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯದೀಶರ ಸಂಘದ ಕಾರ್ಯದರ್ಶಿ ಕಿಣಕೇರಿ, ಸಾಹಿತಿಗಳು ಹಾಗೂ ವಚನ ಟಿ.ವಿ. ಪ್ರಧಾನ ಸಂಪಾದಕ ಸಿದ್ದು ಯಾಪಲ್‌ಪರವಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಈ ವೇಳೆ ಡಾ. ಪ್ರವೀಣ ಪಲ್ಲೇದ, ಶಾಂತಾ ಪಲ್ಲೇದ, ತೇಜಸ್ವಿನಿ ಪಲ್ಲೇದ, ಚೈತನ್ಯ ಸಂತೋಷ ಪಲ್ಲೇದ ಉಪಸ್ಥಿತರಿದ್ದರು.

ಪ.ಪೂ ಗುರುಪಾದ ದೇವರು ಗುಲಗಂಜಿಮಠ ರೋಣ ಇವರು ಸಮ್ಮುಖ ವಹಿಸಲಿದ್ದು, ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮುರ್ತಿಗಳು ಹಾಗೂ ವಿಶ್ರಾಂತ ಲೋಕಾಯುಕ್ತರಾದ ಎನ್. ಸಂತೋಷ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಎಸ್.ಜಿ. ಪಲ್ಲೇದ ತಿಳಿಸಿದರು.


Spread the love

LEAVE A REPLY

Please enter your comment!
Please enter your name here