ಪ್ರತಿನಿತ್ಯ ಬೆಳಿಗ್ಗೆ ಎದ್ದಾಕ್ಷಣ ಪ್ರತಿಯೊಬ್ಬರೂ ಧರ್ಮಸ್ಥಳ ಮಂಜುನಾಥನನ್ನು ನೆನೆಸಿಕೋಳ್ತೆವೆ.
ಗದಗ:- ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ಧರ್ಮಸ್ಥಳ ಪ್ರಕರಣ ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ ಎಂದು ರೋಣ ಶಾಸಕ ಜಿ. ಎಸ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಿ.ಎಲ್.ಪಿ ಸಭೆಯಲ್ಲಿ ಬಹುತೇಕ ಶಾಸಕರು ಸಿಎಂಗೆ ಒತ್ತಾಯ ಮಾಡಿದ್ದೇವೆ. ಹೇಗಾದ್ರೂ ಮಾಡಿ ಈ ಪ್ರಕರಣ ನಿಲ್ಲಿಸಿ. ಬೇಗ ಮುಕ್ತಾಯ ಮಾಡಬೇಕು ಎನ್ನುವುದು ನಮ್ಮ ಶಾಸಕಾಂಗ ಪಕ್ಷದ ಮುಖಂಡರದ್ದಾಗಿದೆ. ಧರ್ಮಸ್ಥಳದ ಬಗ್ಗೆ ನಮಗೆ ಬಹಳ ಗೌರವ ಇದೆ.
ಸರ್ಕಾರ ತನಿಖೆ ತಾನಾಗಿಯೇ ಪ್ರಾರಂಭ ಮಾಡಿಲ್ಲ. ಯಾರೋ ಬಂದು ಕಂಪ್ಲೆಂಟ್ ಮಾಡಿದ ಮೇಲೆ ಸ್ವಾಭಾವಿಕವಾಗಿ ತನಿಖೆ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಬಿಜೆಪಿ ಸುಮ್ಮನ್ನಿತ್ತು. ಎಸ್.ಐ.ಟಿ ಮಾಡಿದ್ದಕ್ಕೆ ಸ್ವಾಗತ ಮಾಡ್ತಿವಿ ಅಂದ್ರು. ಈಗ ಯಾಕೆ ಅವರಿಗೆ ಅನುಮಾನ ಬಂದಿದೆ ಎಂದು ಕಿಡಿಕಾರಿದರು. ಒಟ್ಟಾರೆ ನಮ್ಮ ಶಾಸಕರು ಎಸ್ ಐಟಿ ತನಿಖೆಯಲ್ಲಿ ಏನೂ ಸಿಕ್ಕಿಲ್ಲ. ಮುಕ್ತಾಯ ಮಾಡಬೇಕು ಅನ್ನೋ ಒತ್ತಾಯ ಮಾಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಎದ್ದಾಕ್ಷಣ ಪ್ರತಿಯೊಬ್ಬರೂ ಧರ್ಮಸ್ಥಳ ಮಂಜುನಾಥನನ್ನು ನೆನೆಸಿಕೋಳ್ತೆವೆ. ಆದರೆ ಇತ್ತೀಚಿನ ಬೆಳವಣಿಗೆ ನೋವು ತಂದಿದೆ ಎಂದರು.
ಇದೇ ವೇಳೆ ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ವಿರುದ್ಧ ಶಾಸಕ ಜಿಎಸ್. ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಅವ್ರಿಗೆ ಬೇರೆ ಉದ್ಯೋಗವೇ ಇಲ್ಲ. ಮೊದಲೇ ಬಂದ ಮಾಡಿಸಬೇಕಿತ್ತು. ವಾತಾವರಣ ತಿಳಿ ಇರ್ತಿತ್ತು. ಧರ್ಮಸ್ಥಳ ಬಗ್ಗೆ ಗೌರವ ಹೆಚ್ಚಾಗುತ್ತಿತ್ತು. ದಾಖಲೆ ನೋಡಿ ಬಿಜೆಪಿ ಅವ್ರು ಸ್ವಾಗತ ಮಾಡಿದ್ದಾರೆ ಎಂದರು.
ಹಿಂದುತ್ವದ ಭಾವನೆ ರಾಜ್ಯದಲ್ಲಿ ಹಬ್ಬಿಸಬೇಕು ಅನ್ನೋ ಬಿಜೆಪಿ ವಿಚಾರವಾಗಿ ಮಾತನಾಡಿ, ಕೋಮು ಸೌಹಾರ್ದತೆ ಹಾಳು ಮಾಡೋದು ಬಿಜೆಪಿ ಕೆಲಸ. ಅದರ ಲಾಭ ಪಡೆಯೋದೆ ಬಿಜೆಪಿ ಸ್ಪಷ್ಟ ಉದ್ದೇಶ. ಪ್ರಕರಣ ಎಸ್.ಐ.ಟಿ ತನಿಖೆಗೆ ವಹಿಸಿದಾಗ ಬಿಜೆಪಿಯವ್ರು ಸ್ವಾಗತ ಮಾಡಿದ್ರು. ಇಂತಹ ಸಮಯದಲ್ಲಿ ಹಿಂದುತ್ವದ ವಿಚಾರ ರಾಜ್ಯದಲ್ಲಿ ಹರಡಿಸ್ಬೇಕು. ಸಮಾಜ ಹಾಳು ಮಾಡ್ಬೇಕು ಅದರಿಂದ ನಾವು ಲಾಭ ಪಡಿಬೇಕು ಎನ್ನುವುದು ಬಿಜೆಪಿಯವ್ರ ಕೆಲಸ. ಗೊಂದಲ ಬೇಗ ಮುಗಿಯಲಿ ಅನ್ನೋದು ನಮ್ ಆಸೆ ಎಂದು ಹೇಳಿಕೆ ನೀಡಿದ್ದಾರೆ.