ಬೆಂಗಳೂರು:- ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರವೂ ಶಾಮೀಲಾಗಿರುವ ಅನುಮಾನ ಪಡಬೇಕಾಗುತ್ತದೆ ಎಂದು ಎಂಎಲ್ಸಿ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, 24 ಕೊಲೆಗಳ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದಾರೆ ಅಂತ ಮಹೇಶ್ ತಿಮರೋಡಿ ಆರೋಪ ಮಾಡಿದ್ದಾರೆ. ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ಈ ಬಗ್ಗೆಯೂ ತನಿಖೆಯಾಗಲಿ.
ಧರ್ಮಸ್ದಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ಧರ್ಮಸ್ಥಳದ ವಿರದ್ಧ ಅಪಪ್ರಚಾರ ನಡೆಯುತ್ತಿದ್ದು ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಕನ್ವರ್ಟ್ ಆದವರು, ಮತಾಂತರಕ್ಕೆ ಬೆಂಬಲ ನೀಡುವವರು ಹೋಗಿ ಹೋರಾಟ ಮಾಡ್ತಾರಾ? ಅಂತ ಪ್ರಶ್ನಿಸಿದರು.
ಅನಾಮಿಕ ತೋರಿಸಿದ 16 ಜಾಗಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಅವನ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಯುಟ್ಯೂಬ್, ಸೋಶಿಯಲ್ ಮೀಡಿಯಾದವರೂ ಸೇರಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳೇ ಷಡ್ಯಂತ್ರ ಆಗಿದೆ ಅಂದಿದ್ದಾರೆ. ನಮಗೂ ಅದೆ ಅನುಮಾನ ಅನಾಮಿಕನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು.
ಸೋಷಿಯಲ್ ಮೀಡಿಯಾ ಯೂಟ್ಯೂಬ್‌ನಲ್ಲಿ ಮಾತನಾಡಿದವರ ವಿರುದ್ಧವೂ ಕ್ರಮ ತಗೆದುಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ಮಾಸ್ಕ್ ಮ್ಯಾನ್ ಮೇಲೆ ಇವರಿಗೆ ಶ್ರದ್ದೆನಾ? ಕೋಟ್ಯಂತರ ಜನರ ಭಕ್ತಿಯ ಧಾರ್ಮಿಕ ಕೇಂದ್ರದ ಮೇಲೆ ಇವರಿಗೆ ಶ್ರದ್ದೆನಾ? ಅಂತ ಪ್ರಶ್ನೆ ಮಾಡಿದರು.