ಬೆಂಗಳೂರು: ಸೂಪರ್ ಹಿಟ್ ದಿಯಾ ಸಿನಿಮಾದ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದ ಜಮೀನಿನ ಒಡೆತನದ ವಿಚಾರವಾಗಿ ನಿರ್ಮಾಪಕ ಕೃಷ್ಣ ಚೈತನ್ಯ ಸೇರಿದಂತೆ ಮೂವರ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನಿಗೆ ಅತಿಕ್ರಮ ಪ್ರವೇಶ ಆರೋಪದ ಹಿನ್ನೆಲೆ ರೈತ ಗುರುಮೂರ್ತಿ ಎಂಬುವವರು ನಿರ್ಮಾಪಕ ಕೃಷ್ಣ ಚೈತನ್ಯ ಸೇರಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ರೈತ ಹಾಗೂ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿ, ಜೀವ ಬೆದರಿಕೆವೊಡ್ಡಿರುವ ಆರೋಪ ಕೃಷ್ಣ ಚೈತನ್ಯ ವಿರುದ್ಧ ಕೇಳಿ ಬಂದಿದೆ.
ರೈತ ಗುರುಮೂರ್ತಿ ತಮ್ಮ ಜಮೀನನ್ನು ನರ್ಸರಿ ಮಾಡಲಿಕ್ಕೆ ಭೋಗ್ಯಕ್ಕೆ ನೀಡಿದ್ರು. ಕಸವನಹಳ್ಳಿಯಲ್ಲಿ 3.25 ಗುಂಟೆ ಜಮೀನು ಹೊಂದಿರುವ ರಾಮಮೂರ್ತಿ. 2005 ರಲ್ಲಿ ಜಮೀನು ಖರೀದಿಸಿದ್ದರಂತೆ. ತಮ್ಮ ಜಮೀನನ್ನ ನರ್ಸರಿ ಮಾಡಲಿಕ್ಕೆ ಶಶಿಕಲಾ ಕೋದಂಡಚಾರಿ ಎಂಬುವವರಿಗೆ ಆರು ಲಕ್ಷಕ್ಕೆ ಭೋಗ್ಯಕ್ಕೆ ನೀಡಿದ್ರು. ಆಗಸ್ಟ್ 13 ರಂದು ಜಮೀನಿನ ಬಳಿ ಬಂದಿರುವ ನಿರ್ಮಾಪಕ ಕೃಷ್ಣಚೈತನ್ಯ, ಇತರರು. ನಕಲಿ ದಾಖಲೆ ಸೃಷ್ಟಿಸಿಕೊಂಡು ರಾಮಮೂರ್ತಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.