ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಗುರುರೇಣುಕಾ ಪ್ರೊಡಕ್ಷನ್ ತುಮಕೂರು ಅವರ `ಅಂತರ್ಯಾಮಿ’ ಕನ್ನಡ ಚಲನಚಿತ್ರದ `ಹಕ್ಕಿ ನಾನು ಹಗಲಿನಲ್ಲಿ’ ಹಾಡನ್ನು ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತರಚನೆಕಾರ ಸಿಂಪಲ್‌ಸುನಿ ಬಿಡುಗಡೆ ಮಾಡಿ ಶುಭ ಕೋರಿದರು.
ಚಿತ್ರದ ಶೀರ್ಷಿಕೆಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದ್ದರು. ಚಿತ್ರದ ಫಸ್ಟ್ ಲುಕ್ ಅನ್ನು ಗೃಹಮಂತ್ರಿ ಜಿ ಪರಮೇಶ್ವರ್ ಅನಾವರಣಗೊಳಿಸಿದ್ದರು ಎಂದು ನಿರ್ಮಾಪಕ ನವೀನ್ ಎನ್.ಜಿ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಧನಂಜಯ್, ನಾಯಕ ಪ್ರಣವ್, ನಾಯಕಿ ಮೊಹಿರಾಚಾರ್ಯ ಸಾಹಿತಿ ವಿನಯ್, ಕಾವ್ಯ, ಕಾಂತಿ ಮತ್ತು ಅರವಿಂದ ಸೇರಿದಂತೆ ಚಿತ್ರತಂಡದವರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ನಾಯಕರಾಗಿ ಪ್ರಣವ್, ನಾಯಕಿಯಾಗಿ ಮೋಹಿರ ಆಚಾರ್ಯ, ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾಂಬ, ರುದ್ರಮುನಿ, ಯೋಗೇಶ ಮೊದಲಾದವರಿದ್ದಾರೆ. ಛಾಯಾಗ್ರಹಣ ಎಸ್.ಬಾಲು, ವಿನಯ್ ಕಾವ್ಯ ಕಾಂತಿಯವರ ಸಾಹಿತ್ಯ, ಪೃಥ್ವಿ ಭಟ್, ಮೇಘನಾ ಕುಲಕರ್ಣಿ, ದೇಸಿ ಮೋಹನ್ ರವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಸಂಗೀತ ದೇಸಿ ಮೋಹನ್, ಸಂಕಲನ ಅರವಿಂದ್ ರಾಜ್, ನೃತ್ಯ ನಿರ್ದೇಶನ ಬಾಲು ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಡಿಆಯ್ ಚೆನೈ, ಬೆಂಗಳೂರ, ಪಿ.ಆರ್.ಓ ಎಂಜೆಎಸ್‌ಪಿಆರ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ. ನಿರ್ದೇಶನ ತಂಡದಲ್ಲಿ ರವಿ ಶಂಕರ್‌ನಾಗ್, ಶರತ್ ಘಾಟಿ, ಮಂಜುನಾಥ್ ಹೊಸರಂಗಾಪುರ, ಮುಕುಂದ, ರಾಣಾ, ವಸಂತ್ ಇದ್ದಾರೆ. ನವೀನ್ ಎನ್.ಜಿ ನಿರ್ಮಾಪಕರಾಗಿರುವ ಈ ಚಿತ್ರವನ್ನು ಕೆ. ಧನಂಜಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.