ಪ್ರತ್ಯಕ್ಷ ದತ್ತಾಂಶ ಕ್ರೋಢೀಕರಣವಾಗಿಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸಮಾಜ ರಾಜ್ಯಾದ್ಯಂತ ಎಂಟು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆಯಾದರೂ ಕೇವಲ 27 ಸಾವಿರ ಜನಸಂಖ್ಯೆ ಎಂದು ನಮೂದಿಸಿ ಎಸ್‌ಎಸ್‌ಕೆ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಪಂಚ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ್ ಆರೋಪಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಜಾತಿಗಣತಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸ್ಪಷ್ಟವಾದ ಮಾಹಿತಿ ಪಡೆಯಬೇಕು. ಕೇವಲ ಹುಬ್ಬಳ್ಳಿ, ಧಾರವಾಡದಲ್ಲಿ ಅಷ್ಟೇ 70ರಿಂದ 80 ಸಾವಿರ ಜನಸಂಖ್ಯೆ ಹೊಂದಿದ್ದೇವೆ. ಬೆಳಗಾವಿ, ಗದಗ, ಬಾದಾಮಿ, ಗಜೇಂದ್ರಗಡ ಸೇರಿದಂತೆ ರಾಜ್ಯಾದ್ಯಂತ ನಮ್ಮ ಸಮಾಜದವರಿದ್ದಾರೆ ಎಂದರು.

ಕಾಂತರಾಜ್ ಆಯೋಗ ಜೂ.27, 2014ರಲ್ಲಿ ಮೂರು ವರ್ಷಗಳ ಅವಧಿಗೆ ಜಾರಿಗೆ ಬಂದಿತು. ಆಯೋಗಕ್ಕೆ ವರದಿ ಪೂರ್ಣಗೊಳಿಸಲು ಅನುವು ಮಾಡಿಕೊಡಲು ಆಯೋಗದ ಅವಧಿ, ವಿಶೇಷವಾಗಿ ಅಧ್ಯಕ್ಷರ ಅಧಿಕಾರಾವಧಿಯನ್ನು ಹಲವು ಬಾರಿ ವಿಸ್ತರಿಸಲಾಯಿತು. ಕಾಂತರಾಜ್ ಆಯೋಗದ ವರದಿ 10 ವರ್ಷ ಗತಿಸಿದರೂ ಸರಕಾರಕ್ಕೆ ಸಲ್ಲಿಸಲಿಲ್ಲ. ನಂತರ ಬಂದ ಕೆ.ಜಯಪ್ರಕಾಶ ಹೆಗಡೆ 2024ರಲ್ಲಿ ಸಂಗ್ರಹಿಸಿದ ವರದಿಯನ್ನು ಅಂತಿಮವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಈ ವರದಿ ಹಲವಾರು ಕಾರಣಗಳಿಂದ ಅಸಮಾಧಾನ ಹುಟ್ಟುಹಾಕಿತು ಎಂದರು.

ಸಮಾಜದ ಮುಖಂಡ ವಸಂತಸಾ ಲದ್ವಾ ಮಾತನಾಡಿ, ರಾಜ್ಯದ ಪಟ್ಟೆಗಾರ, ಪಟೇಗಾರ, ಸೋಮವಂಶ ಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ, ಸಾವಜಿ ಸಮಾಜಕ್ಕೆ ಈ ವರದಿಯಿಂದ ಅನ್ಯಾಯವಾಗಿದೆ. ನಂತರ ಬಂದ ಕೆ. ಜಯಪ್ರಕಾಶ ಹೆಗಡೆಯವರು ಸಲ್ಲಿಸಿದ್ದು ಜಾತಿ ಗಣತಿಯೋ, ಸಮೀಕ್ಷೆಯೋ ಅಥವಾ ಮಾದರಿ ಸಮೀಕ್ಷೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜಾತಿ ಗಣತಿ ಜನಸಂಖ್ಯೆಯು, ಪ್ರತಿಯೊಬ್ಬ ಸದಸ್ಯನಿಂದ ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಬಿಂದುಗಳನ್ನು ಒಳಗೊಂಡಿರುವುದರಿAದ ನಿಖರ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಂಬಸಾ ಖಟವಟೆ, ರಾಜು ಬದಿ, ರವಿ ಸಿದ್ಲಿಂಗ, ಬಲರಾಮ್ ಬಸವಾ, ವಿನೋದ ಬಾಂಡಗೆ, ಅಂಬಸಾ ಖಟವಟೆ, ಅನಿಲ ಖಟವಟೆ ಇದ್ದರು.

ಜಯಪ್ರಕಾಶ ಹೆಗಡೆಯವರು ಮನೆ ಮನೆಗೆ ತೆರಳಿ ಪ್ರತ್ಯಕ್ಷ ದತ್ತಾಂಶ ಕ್ರೋಢೀಕರಣ ಮಾಡಿಲ್ಲ. ಹತ್ತು ವರ್ಷಗಳ ನಂತರ ಸಮೀಕ್ಷೆಗಳನ್ನೊಳಗೊಂಡ ಮೂಲ ಪ್ರತಿ ಇಲ್ಲದೇ ಹಲವು ವಿವರಗಳನ್ನು ಕ್ರೋಢೀಕರಿಸಿ ಉತ್ತಮಪಡಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ವಸಂತಸಾ ಲದ್ವಾ ಆಯೋಗಗಳ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here