ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯವೇ ಭಾಗ್ಯವೆಂದು ಹಿರಿಯರು ತಮ್ಮ ಅನುಭವದ ಮೇಲೆ ಹೇಳಿದ್ದಾರೆ. ಕಾರಣ, ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಐ.ಎಂ.ಎ ಸಂಘದ ಉಪಾಧ್ಯಕ್ಷ ಡಾ. ಜಿ.ಬಿ. ಬಿಡನಾಳ ತಿಳಿಸಿದರು.
ಗದಗ ಜಿಲ್ಲಾ ವಾಣಿಜ್ಯೊದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮದ ನಿಮಿತ್ತ ಐ.ಎಂ.ಎ ಗದಗ, ಲಯನ್ಸ್ ಕ್ಲಬ್, ಸಿ.ಎಸ್.ಐ ಬ್ಲಡ್ ಬ್ಯಾಂಕ್, ಜಿಲ್ಲಾ ಔಷಧಿಗಳ ವ್ಯಾಪಾರಸ್ಥರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಗ್ಯವೇ ನಿಜವಾದ ಸಂಪತ್ತು. ನೀವು ದುಡಿದು ಗಳಿಸಿದ ಹನವನ್ನು ಅನುಭವಿಸಲು ಆರೋಗ್ಯ ಬೇಕು. ರಕ್ತದಾನ ಮಾಡಿ ಜೀವ ಉಳಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ತಿಳಿಸಿದರು.
ಉಚಿತ ಆರೋಗ್ಯ ತಪಾಸಣೆಯಲ್ಲಿ ಡಾ. ಜಗದೀಶ ಶಿರೋಳ, ಡಾ. ಶ್ರೀಧರ ಕುರಡಗಿ, ಡಾ. ತುಕಾತಾಮ ಸೂರಿ, ಡಾ. ನವೀನ ಹಿರೇಗೌಡ್ರ, ಡಾ. ಶಿಲ್ಪಾ ಕುಷ್ಟಗಿ, ಡಾ. ರೇಷ್ಮಾ ಪಾಟೀಲ, ಡಾ. ವೀರೇಶ, ಡಾ. ಹೊಸಮನಿ, ಡಾ. ಭೀಮಸಿಂಗ್ ಮುಂತಾದವರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿ, ಸಲಹೆ-ಸೂಚನೆ ನೀಡಿ, ಉಚಿತ ಔಷಧಿ ವಿತರಿಸಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವರ್ಣೇಕರು ವಂದಿಸಿದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



