ಚಾಮರಾಜನಗರ:- ಇಲ್ಲಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಸೋಮವಾರ) ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿತ್ತು. ಈ ವೇಳೆ 93 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸೋಮವಾರ ಬೆಳಿಗ್ಗೆ 9.20 ರಿಂದ 10.10 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸುತ್ತೂರು ಶ್ರೀ ದೇಶಿ ಕೇಂದ್ರ ಶಿವರಾತ್ರಿಶ್ವರ ಸ್ವಾಮೀಜಿ ಹಾಗೂ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ವಧುವಿಗೆ ಸೀರೆ, ಮಾಂಗಲ್ಯ,ಬಳೆ, ರವಿಕೆ,ಕಾಲುಂಗುರ ಹಾಗೂ ವರನಿಗೆ ಪಂಚೆ,ಶರ್ಟ್, ಟವೆಲ್ ನ್ನು ಪ್ರಾಧಿಕಾರದ ವತಿಯಿಂದ ನೀಡಲಾಯಿತು.
ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರು ಜನರಲ್ಲಿ ಜಾಗೃತಿ ಮೂಡಿಸಿದ ಪವಾಡ ಪುರುಷರು. ಇಂತಹ ಪುಣ್ಯ ಕ್ಷೇತ್ರದಲ್ಲಿ ಉಚಿತ ವಿವಾಹ ಮಹೋತ್ಸವ ನಡೆಯುತ್ತಿದೆ ಎಂದರೆ ನೀವೆಲ್ಲರೂ ಪುಣ್ಯವಂತರು. ಇಂತಹ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ನೀವು ಒಳ್ಳೇಯ ಜೀವನ ನಡೆಸಬೇಕು.ದಂಪತಿಗಳು ಇಬ್ಬರೂ ಆದರೂ ಮಾನಸಿಕ ವಾಗಿ ಒಂದೇ ಆಗಬೇಕು, ಪರಸ್ಪರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಂದರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಕಷ್ಟು ಮುಖಂಡರು ಭಾಗಿಯಾಗಿದ್ದರು.