ಗದಗ:- ಗದಗನಲ್ಲಿ ಬೀದಿ ದನಗಳ ಹಾವಳಿಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಕಾಯಿಪಲ್ಯ ಖರೀದಿಗೆ ಬಂದಿದ್ದ ಗ್ರಾಹಕನ ಮೇಲೆ ಏಕಾಏಕಿ ಗೂಳಿ ದಾಳಿ ಮಾಡಿರುವ ಘಟನೆ ಗದಗ ನಗರದ ಗ್ರೇನ್ ಮಾರ್ಕೆಟ್ ನಲ್ಲಿ ಜರುಗಿದೆ.
Advertisement
ವ್ಯಕ್ತಿಗೆ ಗೂಳಿ ಗುದ್ದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯ ಕೈಯಲ್ಲಿನ ಪಿಂಕ್ ಕಲರ್ ತಾರ್ಪಲ್ ಕವರ್ ನೋಡಿ ಇದ್ದಕ್ಕಿದ್ದಂತೆ ಹಿಂಬದಿಯಿಂದ ಗೂಳಿ ಗುದ್ದಿದೆ. ಮಾರ್ಕೆಟ್ ನಲ್ಲಿ ನಡೆದುಕೊಂಡು ಹೋಗ್ತಿದ್ದಾಗ ಈ ದಾಳಿ ನಡೆದಿದೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು,ಗಾಯಗೊಂಡ ವ್ಯಕ್ತಿಯನ್ನ ಸ್ಥಳೀಯ ವ್ಯಾಪಾರಸ್ಥರು ರಕ್ಷಣೆ ಮಾಡಿದ್ದಾರೆ.
ಇನ್ನೂ ಬೀದಿದನಗಳ ಹಾವಳಿಗೆ ಬ್ರೇಕ್ ಹಾಕಲು ನಗರಸಭೆಗೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.