ಬೆಂಗಳೂರು: ಡ್ರಗ್ಸ್ ಮಾರಾಟ ಹಾಗೂ ಮೊಬೈಲ್ ಕಳ್ಳತನಕ್ಕೆ ಸಹಚರರನ್ನು ಬಳಸುತ್ತಿದ್ದ ಆರೋಪಿಯನ್ನೂ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತೌಸಿಫ್ ಬಂಧಿತ ಆರೋಪಿ, ಕೋರಮಂಗಲ ಪೊಲೀಸರು ಡ್ರಗ್ಸ್ ಮಾರಾಟದ ಸುಳಿವಿನ ಆಧಾರದ ಮೇಲೆ ಬಲೆ ಬೀಸಿದಾಗ, ಮೊದಲಿಗೆ ತೌಸಿಫ್ ಸಹಚರರು ಎಂಡಿಎಂಎ ಜೊತೆಗೆ ಸಿಕ್ಕಿಬಿದ್ದರು.
Advertisement
ನಂತರ ಪೊಲೀಸರು ತೌಸಿಫ್‌ನನ್ನು ಬಂಧಿಸಿ, ಅವನಿಂದ ಒಂದು ಬ್ಯಾಗ್ ತುಂಬಾ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ, ತೌಸಿಫ್ ತನ್ನ ಸಹಚರರಿಂದ ಎಂಡಿಎಂಎ ಮಾರಾಟ ಹಾಗೂ ಮೊಬೈಲ್ ಕಳ್ಳತನ ಮಾಡಿಸಿ, ಅವುಗಳನ್ನು ಹೈದರಾಬಾದ್ ಮೂಲದವರಿಗೆ ಮಾರಾಟ ಮಾಡಿಸುತ್ತಿದ್ದನೆಂಬುದು ಬೆಳಕಿಗೆ ಬಂದಿದೆ.
ತೌಸಿಫ್ ಡ್ರೈವರ್ ಆಗಿದ್ದು, ನೇರವಾಗಿ ಕಳ್ಳತನ ಮಾಡುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಅವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು 16 ಲಕ್ಷ ರೂ. ಮೌಲ್ಯದ 48 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.