ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವರವ ಬೇಡಿ ಬರುವ ಭಕ್ತರಿಗೆ ಬೇಡಿದ ವರವ ನೀಡುವ ಶ್ರೀಕ್ಷೇತ್ರ ವರವಿ ಮೌನೇಶ್ವರರು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೂಡಾ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದು, ಮೌನೇಶ್ವರರ ಮಹಾ ರಥೋತ್ಸವಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಭಕ್ತರು ಆಗಮಿಸಿ ರಥೋತ್ಸವ ಹಾಗೂ ಮಹಾ ಪ್ರಸಾದದಲ್ಲಿ ಪಾಲ್ಗೊಂಡು ಪುನೀತರಾಗುತ್ತರೆ ಎಂದು ಲೇಬಗೇರಿ ಶ್ರೀ ಲಕ್ಷ್ಮೇಂದ್ರ ಸ್ವಾಮಿಗಳ ಮಠದ ಶ್ರೀ ನಾಗಮೂರ್ತೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಜಾತ್ರಾಮಹೋತ್ಸವ ಉದ್ಘಾಟನೆ ಆಶೀರ್ವಚನ ನೀಡಿದರು.
ವರವಿ ಕ್ಷೇತ್ರದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು, ಶ್ರೀ ವೀರಾಂದ್ರ ಮಹಾಸ್ವಮಿಗಳು, ನವಲಗುಂದ ಶ್ರೀ ನಾಗಲಿಂಗಪ್ಪಜ್ಜನ ಮಠ, ಸವದತ್ತಿ ದಾನಲಿಂಗೇಶ್ವರ ಮಠದ ಶ್ರೀ ಸೋಮಲಿಂಗೇಶ್ವರ ಮಹಾಸ್ವಾಮಿಗಳು, ವಿಜಯಪುರ ಶ್ರೀ ಮೂರು ಜಾವಾದೀಶ್ವರ ಮಠದ ಶ್ರೀ ಮಹೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ಮೌನೇಶ್ವರರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಮೋಹನ್ ಸಿ.ನರಗುಂದ ಪ್ರಾಸ್ತಾವಿಕವಿಕವಾಗಿ ಮಾತನಾಡಿದರು.
ಡಾ. ಅಶೋಕ ಜತ್ತಿ, ಪೊಲೀಸ್ ಅಧಿಕಾರಿ ಚನ್ನಯ್ಯ ದೇವೂರ, ಶಂಕರಾಚಾರ್ಯ ಕಡ್ಲಾಸ್ಕರ, ಕಾರ್ಯದರ್ಶಿ ಮಹೇಶ ಹುಲಬಜಾರ, ಟ್ರಸ್ಟಿಗಳಾದ ವ್ಹಿ.ಎಮ್. ಕೊಟ್ರೇಶ್ ಆಚಾರ್ಯ, ನಿರಂಜನ ನಿಂಗಪ್ಪ ಬಡಿಗೇರ, ಚಂದ್ರಕಾಂತ ಸದಾಶಿವ ಸೋನಾರ, ಮೌನೇಶ ಜಿ.ಬಡಿಗೇರ (ನರೇಗಲ್ಲ), ಶ್ರೀಧರ ಕೊಣ್ಣೂರ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖಂಡರಾದ ರಾಜಗೋಪಾಲ ಡಿ.ಕಡ್ಲಿಕೊಪ್ಪ ಸ್ವಾಗತಿಸಿದರು. ವಿಶ್ವನಾಥ ಯ.ಕಮ್ಮಾರ ನಿರೂಪಿಸಿ ವಂದಿಸಿದರು. ರ್ಕಾಕ್ರಮದಲ್ಲಿ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು, ವರವಿ ಗ್ರಾಮಸ್ಥರು, ಸದ್ಭಕ್ತರು ಪಾಲ್ಗೊಂಡಿದ್ದರು.