ಹಾಸನ:– ಇಲ್ಲಿನ ಹಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
Advertisement
ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ರೋಗಿಗಳ ವಾರ್ಡ್ ಗೆ ಬೀದಿ ನಾಯಿ ಎಂಟ್ರಿ ಕೊಟ್ಟಿದ್ದು, ಈ ದೃಶ್ಯ ನೋಡಿದ ರೋಗಿಗಳು ಆತಂಕಗೊಂಡಿದ್ದಾರೆ. ಇದು ಹಿಮ್ಸ್ ಆಸ್ಪತ್ರೆ ಗೋಳು ಅಂತ ವಿಡಿಯೋ ಮಾಡಿ ರೋಗಿ ಕಡೆಯವರು ಕಿಡಿಕಾರಿದ್ದಾರೆ.
ಆಸ್ಪತ್ರೆ ಒಳಗೆ ಬರುವ ರೋಗಿ ಕಡೆಯವರನ್ನು ತಡೆಯೋ ಸೆಕ್ಯುರಿಟಿ ಗಾರ್ಡ್ ಬೀದಿ ನಾಯಿ ಮಾತ್ರ ತಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಹಾಸನ ಹಿಮ್ಸ್ ಆಸ್ಪತ್ರೆ ಮೂರನೇ ಮಹಡಿಗೆ ನಾಯಿ ಹೋಗಿದ್ದು ಹೇಗೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ವಾರ್ಡ್ ನಲ್ಲಿ ಓಡಾಡಿದ ನಾಯಿ ಆತಂಕ ಸೃಷ್ಟಿಸಿದೆ. ಹುಚ್ಚು ನಾಯಿಯಾಗಿದ್ರೆ ತೊಂದರೆ ಆಗುತ್ತಿತ್ತು ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.