ಶಿವಮೊಗ್ಗ:- ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಉಂಟಾದ ಜಗಳದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ನಗರದ ಎಪಿಎಂಸಿ ಬಳಿಯ ಪ್ರಿಯಾಂಕ ಲೇಔಟ್ ಬಳಿ ಜರುಗಿದೆ.
Advertisement
ಹನುಮಂತ ಚಾಕು ಇರಿದ ಆರೋಪಿ. ಜನಾರ್ದನ ಕೊಲೆಯಾದ ದುರ್ಧೈವಿ. ಇವರು ಶಿವಮೊಗ್ಗ ತಾಲೂಕಿನ ಬನ್ನಿಕೇರಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಸಹೋದರರ ನಡುವೆ ನಿನ್ನೆ ರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಜಗಳದಲ್ಲಿ ಹನುಮಂತ ತನ್ನ ಸಹೋದರ ಜನಾರ್ಧನ್ ಗೆ ಚಾಕು ಇರಿದಿದ್ದಾನೆ. ಈ ಹಿನ್ನೆಲೆ ತೀವ್ರವಾಗಿ ಗಾಯಗೊಂಡಿದ್ದ ಜನಾರ್ಧನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಆರೋಪಿ ಹನುಮಂತ ಇಲ್ಲಿನ ವಿನೋಬನಗರ ಪೊಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮೃತ ಜನಾರ್ಧನ ದೊಡ್ಡಪ್ಪನ ಮಗ ಹನುಮಂತ ಎನ್ನಲಾಗಿದೆ.